ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ ಸಿಎಂ ಹೆಚ್ಡಿಕೆ..

05 Jan 2019 2:09 PM |
7446 Report

ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ಸಾಕಷ್ಟು ಒಳಿತನ್ನು ಮಾಡಿದ್ದಾರೆ.. ಇದರ ನಡುವೆ ದೋಸ್ತಿ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಾಗಲಿದೆ ಎಂಬ ಸುದ್ದಿಯು ಕೂಡ ಕೇಳಿಬಂದಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಕುಮಾರಸ್ವಾಮಿಯವರು, ಸದ್ಯಕ್ಕೆ ಬಸ್ ದರ ಏರಿಕೆಗೆ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ..ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಾರಿಗೆ ಇಲಾಖೆಯು ಈಗಾಗಲೇ ನಷ್ಟದಲ್ಲಿದ್ದು, ಬಸ್ ದರ ಏರಿಕೆ ಪ್ರಸ್ತಾವನೆ ಬಂದಿದೆ. ಆದರೆ ಸದ್ಯ ಬಸ್ ದರ ಏರಿಕೆಗೆ ನಿರ್ಧಾರ ಮಾಡಿಲ್ಲ. ಇನ್ನೂ ಕೂಡ ಒಂದು ಸಭೆ ಆಗಬೇಕಿದೆ ಎಂದಿದ್ದಾರೆ... ಸಭೆಯಲ್ಲಿ ಚರ್ಚೆಯನ್ನು ನಡೆಸಿ ಮುಂದಿನ ನಿರ್ಧಾರವನ್ನು  ತೆಗೆದುಕೊಳ್ಳಲಾಗುವುದು. ಜನರಿಗೆ ತೊಂದರೆಯಾಗದಂತೆ ಈ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು

Edited By

hdk fans

Reported By

hdk fans

Comments