ದೋಸ್ತಿ ಸರ್ಕಾರದ ರಾಜ್ಯ ಬಜೆಟ್’ಗೆ ಮೂಹೂರ್ತ ಫಿಕ್ಸ್..!?
ದೋಸ್ತಿ ಸರ್ಕಾರದ ಸಚಿವ ಸಂಪುಟದ ಮನಸ್ತಾಪದ ಮಧ್ಯೆಯು ಇದೀಗ ಸಿಎಂ ಕುಮಾರಸ್ವಾಮಿಯವರು ಬಜೆಟ್ ಮಂಡಿಸುವುದಾಗಿ ತಿಳಿಸಿದ್ದಾರೆ..ಪ್ರತಿಪಕ್ಷಗಳ ಎಲ್ಲಾ ಟೀಕೆಗಳಿಗೂ ಉತ್ತರ ಸಿಗುವ ದಿನ ಅಂದೆ ಆಗಿರುತ್ತದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ..ಫೆಬ್ರವರಿ 8 ರಂದು ರಾಜ್ಯ ಬಜೆಟ್ ನಡೆಸುವುದಾಗಿ ತಿಳಿಸಿದ್ದಾರೆ..
ಫೆಬ್ರವರಿ 8 ರಂದು ರಾಜ್ಯ ಬಜೆಟ್ ನಡೆಸುವುದಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ರೈತರ ಸಾಲಮನ್ನಾ ಕುರಿತಂತೆ ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಟೀಕೆಗೆ ಉತ್ತರ ಕೊಡಲು ಮುಂದಾಗಿದ್ದಾರೆ. ಬರುವ ಫೆಬ್ರವರಿ 8 ರಂದು ಬಜೆಟ್ ನಲ್ಲಿ ಬ್ಯಾಂಕುಗಳಿಗೆ ನೀಡಬೇಕಾದ ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸುವುದಾಗಿಯೂ ಕೂಡ ತಿಳಿಸಿದ್ದಾರೆ..ಬಜೆಟ್ ವೇಳೆ ಸಾಲಮನ್ನಾ ಯೋಜನೆಯ ಪೂರ್ಣಮೊತ್ತ 46 ಸಾವಿರ ಕೋಟಿ ರೂವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
Comments