ದೋಸ್ತಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರೇವಣ್ಣ..!
ರಾಜಕೀಯದಲ್ಲಿ ದೇವರು ದಿಂಡಿರು ಅನ್ನೋದನ್ನ ನಂಬುವುದು ಸ್ವಲ್ಪ ಕಡಿಮೆಯೇ ಆದರೆ..ದೇವರು, ರಾಹುಗಾಲ, ಗುಳಿಕಗಾಲ ಹೀಗೆ ಧಾರ್ಮಿಕ ಆಚರಣೆ, ನಂಬಿಕೆಗಳಿಂದಲೇ ಯಾವಾಗಲೂ ಗಮನ ಸೆಳೆಯುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇದೀಗ ಜ್ಯೋತಿಷಿಗಳಂತೆ ಭವಿಷ್ಯ ನುಡಿಯುತ್ತಿದ್ದಾರೆ.. ಸರ್ಕಾರ ಯಾವುದೇ ಕಾರಣಕ್ಕೂ ಉರುಳುವುದಿಲ್ಲ ಎಂದು ಭವಿಷ್ಯವನ್ನು ನುಡಿದಿದ್ದಾರೆ. 'ಮೈತ್ರಿ ಸರ್ಕಾರದಲ್ಲಿ ಉದ್ಭವಿಸಿರುವ ಎಲ್ಲಾ ಭಿನ್ನಾಭಿಪ್ರಾಯಗಳು ಜ.3ರಿಂದ 13ರೊಳಗೆ ನಿವಾರಣೆ ಆಗಲಿದೆ. ನಾನೇ ಲಗ್ನ ಇಟ್ಟು ಬಿಡುತ್ತೇನೆ, ಏನೂ ಆಗುವುದಿಲ್ಲ ನೋಡಿ' ಎಂದಿದ್ದಾರೆ.
ಬುಧವಾರ ಸಂಜೆ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನೇ ಭವಿಷ್ಯ ಹೇಳುತ್ತಿದ್ದೇನೆ. ಯಾರು ಆತಂಕ ಪಡಬೇಕಾಗಿಲ್ಲ.. ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ತಿಳಿಸಿದರು.. ಈ ಹೇಳಿಕೆಯಿಂದ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.. ರಮೇಶ್ ಜಾರಕಿಹೊಳಿ ಪ್ರಾಮಾಣಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸಚಿವ ಸ್ಥಾನದಿಂದ ಕೈಬಿಟ್ಟಕಾರಣ ಸಣ್ಣಪುಟ್ಟಭಿನ್ನಾಭಿಪ್ರಾಯ ಉಂಟಾಗಿರಬಹುದು. ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
Comments