ಜೆಡಿಎಸ್ ನಾಯಕತ್ವದಲ್ಲಿ ಬದಲಾವಣೆ..!! ಜೆಡಿಎಸ್ ನ ಮುಂದಿನ ನಡೆಯೇನು..?
ನಾಳೆ ಜೆಡಿಎಸ್ ನ ಮಹತ್ವದ ಸಭೆ ನಡೆಯಲಿದ್ದು, ಜೆಡಿಎಸ್ ನಾಯಕತ್ವದಲ್ಲಿ ಶೀಘ್ರದಲ್ಲೆ ಬದಲಾವಣೆ ಆಗುತ್ತಾ ಎಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.. ಇದೀಗ ಈ ರೀತಿಯ ಪ್ರಶ್ನೆ ಎಲ್ಲರಲ್ಲೂ ಕೂಡ ಕಾಡುತ್ತಾ ಇದೆ.. ಇದೇ ಜನವರಿ 3 ರಂದು ಜೆಡಿಎಸ್ ಪಕ್ಷದ ಸಭೆ ನಡೆಯಲಿದೆ.. ಇದರ ಬಗ್ಗೆ ದೇವೆಗೌಡರು ಏನ್ ಹೇಳಿದ್ದಾರೆ ಗೊತ್ತಾ..?
ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ, ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಾಳೆ ಜೆಡಿಎಸ್ ಮಹತ್ವದ ಸಭೆ ನಾಳೆ ನಡೆಯಲಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಸಭೆ ನಡೆಯಲಿದೆ.ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ, ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಸೀಟು ಹಂಚಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ರಾಜಿನಾಮೆ ವಿಷಯವಾಗಿ ಕೂಡ ಚರ್ಚೆ ನಡೆಯಲಿದೆ.. ಅವರೆ ಮುಂದುವರೆಯುತ್ತಾರೋ ಇಲ್ಲವೋ ಎಂಬುದು ಸಧ್ಯದಲ್ಲೆ ತಿಳಿಯಲಿದೆ.
Comments