ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್’ಗೆ ಸಿಕ್ಕ ಕ್ಷೇತ್ರ ಎಷ್ಟು ಗೊತ್ತಾ..?

ದೋಸ್ತಿ ಸರ್ಕಾರದ ರಚನೆಯ ಸಮಯದಲ್ಲಿ ಒಪ್ಪಿಕೊಂಡಿದ್ದ ಮೂರನೇ ಒಂದು ಸ್ಥಾನಗಳನ್ನು ಹಂಚಿಕೊಳ್ಳುವ ಸೂತ್ರ ಇದೀಗ ಲೋಕಸಭೆ ಚುನಾವಣಾ ಟಿಕೆಟ್‌ಗೂ ಕೂಡ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 10 ರಿಂದ 11 ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಅನ್ನು ಆಗ್ರಹಿಸಿದ್ದಾರೆ.
ಇದರ ಹಿನ್ನಲೆಯಲ್ಲಿ ಲೋಕಸಭೆ ಟಿಕೆಟ್ ಹಂಚಿಕೆ ವೇಳೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಮತ್ತೊಂದು ಸುತ್ತಿನ ಜಂಗೀ ಕುಸ್ತಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.. ಈ ಎಲ್ಲ ಪ್ರಕ್ರಿಯೆಗಳನ್ನು ಜನವರಿಯೊಳಗೆ ಮುಗಿಸಿದರೆ ಒಳ್ಳೆಯದು. ಏಕೆಂದರೆ ಬಳಿಕ ಚುನಾವಣಾ ತಯಾರಿ ಕೆಲಸವಿದೆ ಎಂದು ದೇವೇಗೌಡ ತಿಳಿಸಿದರು.
Comments