ಕಾಂಗ್ರೆಸ್ ವಿರುದ್ಧ ದೊಡ್ಡ ಗೌಡರ ಗುಡುಗು..! ಕಾರಣ ಏನ್ ಗೊತ್ತಾ..?
ಈಗಾಗಲೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದು ಎಲ್ಲರಿಗೂ ಕೂಡ ತಿಳಿದೆ ಇದೆ..ಆದರೆ ಇದೀಗ ಕಾಂಗ್ರೆಸ್ ಮೇಲೆಯೇ ದೇವೆಗೌಡರು ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೊದಲ ಬಾರಿಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಮೃದು ದನಿಯಲ್ಲೇ ಚಾಟಿ ಬೀಸಿದ್ದಾರೆ.
ಚುನಾವಣಾ ಫಲಿತಾಂಶ ಹೊರಬಂದಾಗ ಯಾವುದೇ ಷರತ್ತು ಇಲ್ಲ ಬೇಷರತ್ ಬೆಂಬಲ ನೀಡುತ್ತೇವೆ ಎಂದು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ ನಂತರ ನಿಧಾನವಾಗಿ ಕಾಂಗ್ರೆಸ್‌ನವರು ಷರತ್ತು ವಿಧಿಸಿಕೊಂಡು ಬಂದರು. ಕಳೆದ ಬಾರಿ ಜೆಡಿಎಸ್ ಬಿಜೆಪಿ ಜೊತೆ ಸರಕಾರ ರಚನೆ ಮಾಡಿದ್ದಾಗ ಸಮನಾಗಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದರು. ಆದರೆ ಕಾಂಗ್ರೆಸ್‌ನವರು ಮಾತ್ರ ಮೂರನೇ ಒಂದು ಭಾಗ ಎನ್ನುತ್ತಿದ್ದಾರೆ. ಸಚಿವ ಸ್ಥಾನ ಹಂಚಿಕೆಯಲ್ಲೂ ಈ ರೀತಿಯೇ ಮಾಡಿದ್ದರು. ನಿಗಮ ಮಂಡಳಿಯಲ್ಲೂ ಜೆಡಿಎಸ್‌ಗೆ ಸಮನಾದ ಅಧಿಕಾರ ಹಂಚಿಕೆಯಾಗಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
Comments