ಹರಕು ಬಾಯಿಯ ಕೆ.ಎಸ್. ಭಗವಾನ್ ವಿರುದ್ದ ಪ್ರತಿಭಟನೆ, ಎಫ್.ಐ.ಆರ್. ದಾಖಲಿಸಲು ದೂರು ಸಲ್ಲಿಕೆ






ಹಿಂದೂ ಆರಾಧ್ಯದೇವ ಶ್ರೀರಾಮನ ವಿರುದ್ಧ ತನ್ನ ನೀಚ ನಾಲಿಗೆಯನ್ನು ಮತ್ತೊಮ್ಮೆ ಹರಿಬಿಟ್ಟಿರುವ ಹರಕು ಬಾಯಿಯ ಹೊಲಸು ವ್ಯಕ್ತಿತ್ವದ ಕೆ.ಎಸ್. ಭಗವಾನ್ ವಿರುದ್ದ ಹಿಂದೂ ಸಹೋದರರಿಂದ ತಾಲ್ಲೂಕು ಆಫೀಸ್ ಎದುರು ದಿನಾಂಕ 31-12-2018 ಸೋಮವಾರ ಮಧ್ಯಾಹ್ನ 12ಗಂಟೆಗೆ ನಗರದ ನಮೋ ಸೇನೆ ಮತ್ತು ತಾಲ್ಲೂಕು ಬಜರಂಗದಳ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಧರ್ಮ ದ್ರೋಹಿ ಭಗವಾನ್ ನಿನಗೆ ತಾಕತ್ ಇದ್ದರೆ ಸುಮಾರು 60 ವರ್ಷ ದೇಶವಾಳಿ ರಾಷ್ಟದ ಎಲ್ಲಾ ಧರ್ಮದವರನ್ನು ಓಟ್ ಬ್ಯಾಂಕ್ ಮಾಡಿಕೊಂಡು ದೇಶವನ್ನು ಹೀನಾಯ ಸ್ಥಿತಿಗೆ ತಳ್ಳಿದರಲ್ಲ ಅವರ ಭಗ್ಗೆ ಪುಸ್ತಕವನ್ನು ಬರೆಯುವುದು ಬಿಟ್ಟು ಎಂಜಲು ಕಾಸಿಗೋಸ್ಕರ ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿರುವ ನಿನ್ನಂತ ಅರೆ ಬುದ್ಧಿ ಜೀವಿಗಳಿಗೆ ಸ್ವಾತಂತ್ರ್ಯ ಬಂದ ನಂತರ ದೇಶವಾಳಿ ಲೂಟಿಮಾಡಿದವರು ನಿನಗೆ ಕಾಣಲಿಲ್ಲವೇ? ದೇಶವನ್ನಾಳಿ ಲೂಟಿ ಮಾಡುವ ಭ್ರಷ್ಟರ ಭಗ್ಗೆ ಶೋಧ ಮಾಡಿ ಬರೆಯಿರಿ ಆಗ ನಿನ್ನಂತವರನ್ನು ಜನರು ಬುದ್ದಿ ಜೀವಿಗಳು ಅಂತ ನಂಬುತ್ತಾರೆ ಸುಖಾ ಸುಮ್ಮನೆ ಹಿಂದೂ ಭಾವನೆಗಳಲ್ಲಿ ಚಲ್ಲಾಟವಾಡಬೇಡಿ ಎಂದು ಬಾಜಪ ನಗರ ಕಾರ್ಯದರ್ಶಿ ರಾಮಕೃಷ್ಣ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಮೋ ಸೇನೆಯ ಕೆಂಪೇಗೌಡ ಮಾತನಾಡಿ ಕೂತರೆ ನಿಂತರೆ ಹೋಮ ಹವನ ಮಾಡಿಸುತ್ತಾರೆ, ಮಿಸುಕಾಡಲೂ ಇರೋಬರೋ ಎಲ್ಲಾ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವ, ತಾವು ದಿನವೂ ಪೂಜಿಸುವ ದೈವನಿಂದಕರನ್ನು ಬಂದಿಸಲು ಆಗುವುದಿಲ್ಲವಾ? ಇವರದೆಲ್ಲಾ ಬೂಟಾಟಿಕೆ ಭಕ್ತಿಯಾ? ಅಜಿತ್ ಹನುಮಕ್ಕನವರ್ ಒಂದು ಮಾತು ಆಡಿದ್ದಕ್ಕೆ ಆತನ ಬಾಯಿಂದ ಕ್ಷಮೆ ಕೇಳಿಸಿದರು, ಭಗವಾನ್ ಅಂತಾ ಧರ್ಮ ದ್ರೋಹಿಗೆ ಯಾವುದೇ ಶಿಕ್ಷೆ ಇಲ್ಲವಾ? ಅಧಿಕಾರ ತಮ್ಮ ಕೈಯ್ಯಲ್ಲೇ ಇದೆ ಇವನಿಗೆ ಶಿಕ್ಷೆ ಕೊಡಲು ಆಗುವುದಿಲ್ಲವಾ? ಓಟಿನ, ಅಧಿಕಾರದ ಆಸೆಗೆ ಇಷ್ಟೆಲ್ಲಾ ನಾಟಕ ಬೇಕಾ ಎಂದು ಕೇಳಿದರು. ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ ಮಾತನಾಡಿ ಭಗವಾನ್ ಅಂತಾ ಹೆಸರು ಇಟ್ಟುಕೊಂಡು ಸೈತಾನ್ ಕೆಲಸ ಮಾಡೋ ಇಂತವನಿಗೆ ಸರ್ಕಾರ ಜನರ ತೆರಿಗೆ ಹಣದಲ್ಲಿ ರಕ್ಷಣೆ ನೀಡುತ್ತಿದೆ, ಈ ಕೂಡಲೇ ಅದನ್ನು ನಿಲ್ಲಿಸಿ ಭಗವಾನ್ ಬಂದಿಸಲು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಮೋ ಸೇನೆಯ ಸ್ಥಾಪಕ ಕೆಂಪೇಗೌಡ, ಅನಿಲ್, ಶಿವು,ಮನು ಮತ್ತು ಎಲ್ಲಾ ಸದಸ್ಯರು, ಹಿಂದೂ ಜಾಗರಣಾ ವೇದಿಕೆಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು, ಬೆಂ.ಗ್ರಾ.ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಎಂ.ಕೆ.ವತ್ಸಲ, ಕಾರ್ಯದರ್ಶಿ ದಾಕ್ಷಾಯಿಣಿ, ಖಜಾಂಚಿ ಕಮಲಾ ಶ್ರೀನಿವಾಸ್, ಬಿಜೆಪಿ, ನಗರ ಮಹಿಳಾ ಅಧ್ಯಕ್ಷೆ ಗಿರಿಜ, ಮುಖಂಡೆ ಲೀಲಾಮಹೇಶ್, ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಶಿವು, ಬಾಜಪ ನಗರ ಕಾರ್ಯದರ್ಶಿ ರಾಮಕೃಷ್ಣ, ಬಜರಂಗದಳ ಕಾರ್ಯಕರ್ತರು, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಘಾಟಿ ಗೋಶಾಲಾ ಪ್ರಮುಖ ಜೀವನ್, ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಕುಮಾರ್, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಭಾಗವಹಿಸಿ ಭಗವಾನ್ ಮತ್ತು ಆತನಿಗೆ ರಕ್ಷಣೆ ನೀಡುತಿರುವ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ತಾಲ್ಲೂಕು ದಂಡಾಧಿಕಾರಿ ಮೋಹನ್ ರವರಿಗೆ ಮನವಿಪತ್ರ ಸಲ್ಲಿಸಿ, ನಗರ ಪೋಲೀಸ್ ಠಾಣೆಯಲ್ಲಿ ಪಿ.ಎಸ್.ಐ. ಬಿ.ಕೆ.ಪಾಟೀಲ್ ರವರಿಗೆ ಈ ಕೂಡಲೇ ಭಗವಾನ್ ಮೇಲೆ ಎಫ಼್.ಐ.ಆರ್. ದಾಖಲು ಮಾಡಲು ದೂರು ಸಲ್ಲಿಸಿದರು. ನಂತರ ಡಿ.ವೈ.ಎಸ್.ಪಿ ಆರ್. ಮೋಹನ್ ಕುಮಾರ್ ಹತ್ತಿರ ಈ ಕುರಿತು ಮಾಹಿತಿ ನೀಡಿ ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
Comments