ಸಮ್ಮಿಶ್ರ ಸರ್ಕಾರಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ರು ಖಡಕ್ ಎಚ್ಚರಿಕೆ

ಸಮ್ಮಿಶ್ರ ಸರ್ಕಾರಕ್ಕೆ ಮಾಜಿ ಪ್ರಧಾನಿಯಾದ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ರಾಷ್ಟ್ರೀಯ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮ ಉಲ್ಲಂಘಿಸಿದ್ರೆ ಸರ್ಕಾರಕ್ಕೆ ಅಪಾಯವಿದೆ ಎಂದಿದ್ದಾರೆ..
ಮೈತ್ರಿ ಧರ್ಮವನ್ನು ಉಲ್ಲಂಘನೆ ಮಾಡಿದರೆ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ದಂತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೆಚ್.ಡಿ.ದೇವೇಗೌಡರು ಎಚ್ಚರಿಕೆಯನ್ನು ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು. ಅದಕ್ಕಾಗಿ ಮೈತ್ರಿ ಸರ್ಕಾರ ಸುಗಮ ಕಾರ್ಯ ನಿರ್ವಹಣೆಗೆ ದಾರಿ ಕಂಡುಕೊಳ್ಳಬೇಕು ಎಂದರು.. ಎಚ್.ಡಿ.ಕುಮಾರಸ್ವಾಮಿಯಿಂದ ಸಾಲಮನ್ನಾ ಮೂಲಕ ರೈತರಿಗೆ ನೆರವಾಗುವ ಕಾರ್ಯ ನಡೆಯುತ್ತಿದೆ ಎಂದು ಹೆಚ್ ಡಿ ದೇವೆಗೌಡರು ತಿಳಿಸಿದ್ದಾರೆ.
Comments