"ಪರಿಸರಕ್ಕಾಗಿ ಓಟ" 4ಕೆ ಮ್ಯಾರಥಾನ್ ಓಟ 6-01-2019 ಭಾನುವಾರದಂದು
"ಪರಿಸರಕ್ಕಾಗಿ ಓಟ" 4ಕೆ ಮ್ಯಾರಥಾನ್ ಓಟವನ್ನು 6-01-2019 ರ ಭಾನುವಾರದಂದು ಬೆಳಿಗ್ಗೆ 6-30 ನಗರದ ಹಳೇ ಬಸ್ ನಿಲ್ದಾಣದಲ್ಲಿ ಸುಚೇತನ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ [ರಿ.] ರವರಿಂದ ಆಯೋಜಿಸಲಾಗಿದೆ. ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸಿಹಳ್ಳಿಯ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವ ಮ್ಯಾರಥಾನ್ ಉದ್ಘಾಟನೆಯನ್ನು ಬೆಂ.ಗ್ರಾ.ಜಿಲ್ಲಾಧಿಕಾರಿ ಕರೀಗೌಡ ನೆರವೇರಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆ ನಗರಸಭಾಧ್ಯಕ್ಷ ತ.ನ.ಪ್ರಭುದೇವ್ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಅರದೇಶ ಹಳ್ಳಿಯ ಪರಿಸರವಾದಿ ಸೀತಾರಾಂ, ಬೆಂ.ಗ್ರಾ.ಜಿಲ್ಲೆ ಡಿ.ವೈ.ಎಸ್.ಪಿ. ಮೋಹನ್ ಕುಮಾರ್, ದೊಡ್ಡಬಳ್ಳಾಪುರ ಟೌನ್ ಪಿ.ಎಸ್.ಐ. ಬಿ.ಕೆ. ಪಾಟಿಲ್, ನಗರಸಭಾ ಸದಸ್ಯರಾದ ವಿ.ಎಸ್. ರವಿಕುಮಾರ್ ಮತ್ತು ಎಂ. ಶಿವಕುಮಾರ್ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನೆಡೆಯಲಿದೆ. ಎಲ್ಲಾ ಪರಿಸರ ಹಾಗೂ ಕ್ರೀಡಾ ಪ್ರೇಮಿಗಳು ಭಾಗವಹಿಸಲು ಕೋರಲಾಗಿದೆ.
ಓಟದಲ್ಲಿ ಭಾಗವಹಿಸುವವರು ರೂ.1೦೦/- ನೊಂದಣಿ ಶುಲ್ಕವನ್ನು ಕೊಟ್ಟು ಮುಂಗಡವಾಗಿ ತಮ್ಮ ಹೆಸರ ನೊಂದಣಿಯನ್ನು ಕಡ್ಡಾಯವಾಗಿ ಜನವರಿ 3 ರೊಳಗೆ ಮಾಡಿಸಬೇಕು, ಓಟದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ನೊಂದಣಿ ಮಾಡಿಕೊಳ್ಳುವುದಿಲ್ಲ. ಭಾಗವಹಿಸುವವರು ಓಟಕ್ಕೆ ತಕ್ಕಂತೆ ಟ್ರಾಕ್ ಪ್ಯಾಂಟ್, ಟಿ ಷರ್ಟ್ ಮತ್ತು ಶೂ ಧರಿಸಿರಬೇಕು.
ಸ್ಪರ್ಧೆಯನ್ನು ಯಶಸ್ವಿಯಾಗಿ ಮುಗಿಸುವ ಎಲ್ಲಾ ಓಟಗಾರರಿಗೆ ಪ್ರಶಂಸನಾ ಪತ್ರವನ್ನು ಕೊಡಲಾಗುವುದು. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ ಆಕರ್ಷಕ ಬಹುಮಾನ ವಿತರಿಸಲಾಗುವುದು. ಹದಿಮೂರು ವರ್ಷ [13] ಮೇಲ್ಪಟ್ಟವರಿಗೆ ಮಾತ್ರ ಜಾಥಾದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ನೊಂದಣಿ ಆದ ಸ್ಪರ್ಧಿಗಳು ದಿನಾಂಕ 6-1-2019 ಭಾನುವಾರದಂದು ಬೆಳಿಗ್ಗೆ 6-30 ರೊಳಗೆ ತಮ್ಮ ಓಟದ ಸಂಖ್ಯೆಯ ಗುರುತಿನ ಚೀಟಿಯನ್ನು ಪಡೆಯುವುದು ಕಡ್ಡಾಯ. ಓಟದ ವಿಜೇತರಿಗೆ ಸುಚೇತನ ಸಂಸ್ಥೆಯಿಂದ ಯಾವುದೇ ರೀತಿಯ ನಗದು ಬಹುಮಾನ ಇರುವುದಿಲ್ಲ.
ಹೆಚ್ಚಿನ ವಿವರಗಳಿಗೆ ಅಥವಾ ನೊಂದಣೀಗೆ ಸಂಪರ್ಕಿಸಿ:- 9060759008 / 8971434747 / 8971295960 / 8892484198
Comments