ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕ್ಯಾಲೆಂಡರ್ ೨೦೧೯ರ ಬಿಡುಗಡೆ
ದೊಡ್ಡಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ [ಕನ್ನಡಿಗರ ಬಣ] ವತಿಯಿಂದ ಇಂದು ನಗರದ ಕೋರ್ಟ್ ರಸ್ತೆಯಲ್ಲಿರುವ ಚಿಣ್ಣರ ಕೂಟ ಶಾಲೆಯ ಆವರಣದಲ್ಲಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿವಿಜೇತ ಕುವೆಂಪುರವರ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಹೂ ಅರ್ಪಿಸಿ ಶಾಸಕ ವೆಂಕಟರಮಣಯ್ಯ ೨೦೧೯ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು, ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ನಗರಸಭಾಧ್ಯಕ್ಷ ತ.ನ.ಪ್ರಭುದೇವ್, ರುಮಾಲೆ ನಾಗರಾಜ್, ಚಂದ್ರತೇಜಸ್ವಿ, ಮಹಿಳಾ ಸಮಾಜ ಅಧ್ಯಕ್ಷೆ ಕೆ.ಎಸ್.ಪ್ರಭ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಸ್ವಾಮಿ, ಕನ್ನಡ ಪಕ್ಷದ ಸಂಜೀವನಾಯ್ಕ ಆಗಮಿಸಿದ್ದರು.
ದೊಡ್ಡಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ [ಕನ್ನಡಿಗರ ಬಣ] ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಕರ್ ಮಾತನಾಡಿ ತಮ್ಮ ನೇತೃತ್ವದಲ್ಲಿ ಹೊರಡಿಸಿರುವ ಈ ಕ್ಯಾಲೆಂಡರ್ ನಲ್ಲಿ ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ಶ್ರಮಿಸಿರುವ ಹನ್ನೆರಡು ಮಂದಿ ಮಹನೀಯರ ಕುರಿತು ವಿವರಣೆ ನೀಡಿರುವುದು ವಿಷೇಶವಾಗಿದೆ, ಈಗಿನ ಪೀಳಿಗೆಯವರಿಗೆ ಊರಿನ ಅಭಿವೃದ್ಧಿಗೆ ದುಡಿದವರ ಹೆಸರು ಕೂಡಾ ತಿಳಿದಿಲ್ಲ, ದುಡಿದ ಎಲ್ಲರನ್ನೂ ನೆನಪಿಸಿ ಕೊಳ್ಳಲಾಗದಿದ್ದರೂ ಅವರಲ್ಲಿ ಪ್ರಾತಸ್ಮರಣೀಯರಾದಂತಹ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ, ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ಮುಗುವಾಳಪ್ಪ, ನಾ.ನಂಜುಂಡಯ್ಯ, ರುಮಾಲೆ ಚನ್ನಬಸವಯ್ಯ, ಮಹಿಳಾ ಸಮಾಜ ಸ್ಥಾಪಕಿ ಭೀಮಕ್ಕ, ಸಜ್ಜನ ರಾಜಕಾರಣಿ ಜಿ.ರಾಮೇಗೌಡ, ಕಾದಂಬರಿಗಾರ್ತಿ ಡಾ.ಅನುಪಮಾ ನಿರಂಜನ್, ವಿಮರ್ಶಕ ಡಾ.ಡಿ.ಆರ್.ನಾಗರಾಜ್, ರೈತ ಮುಖಂಡ ಡಾ. ಎನ್.ವೆಂಕಟರೆಡ್ಡಿ, ಮಹಾನ್ ದಾನಿ ಅಮಾವಾಸ್ಯೆ ಶ್ರೀಕಂಠಯ್ಯ, ವಾಣೀಜ್ಯೋದ್ಯಮಿ ಶಾಂಪೂರ್ ಪಾಪಣ್ಣ ಇವರುಗಳನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ನಾಗೇಶ್, ರಾಜ್ಯ ಸಹಕಾರ್ಯದರ್ಶಿ ರಮೇಶ್, ತಾಲ್ಲೂಕು ಅಧ್ಯಕ್ಷ ಪ್ರದೀಪ್ ಮತ್ತಿತರರು ಹಾಜರಿದ್ದರು.
Comments