23ನೇ ವರ್ಷದ ಸ್ವಯಂ ಪ್ರೇರಿತ ಪಾದಯಾತ್ರೆ ಘಾಟಿಕ್ಷೇತ್ರಕ್ಕೆ.....ಭಾನುವಾರದಂದು
ದೊಡ್ಡಬಳ್ಳಾಪುರ: ಪ್ರತಿವರ್ಷದಂತೆ ಶ್ರೀ ಘಾಟಿ ಸುಬ್ರಮಣ್ಯ ಜಾತ್ರೆಗೆ ಮುಂಚಿತವಾಗಿ ದೊಡ್ಡಬಳ್ಳಾಪುರದಿಂದ ಘಾಟಿಕ್ಷೇತ್ರಕ್ಕೆ ಪಾದಯಾತ್ರೆ ಕಾರ್ಯಕ್ರಮವನ್ನು ಡಿಸೆಂಬರ್ 30 ರ ಭಾನುವಾರ ನಾಗದಳ ಮತ್ತು ಶ್ರೀ ಮಾರುತಿ ವ್ಯಾಯಾಮಶಾಲೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಕೊಂಗಾಡಿಯಪ್ಪ ಮುಖ್ಯರಸ್ತೆಯ ನೇಯ್ಗೆ ಬೀದಿ ಪಾಠಶಾಲೆ ಬಳಿಯಿಂದ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಪಾದಯಾತ್ರೆ ಪ್ರಾರಂಭವಾಗಲಿದೆ. 1996ರಲ್ಲಿ ಪ್ರಾರಂಭವಾದ ಈ ಪಾದಯಾತ್ರೆ ಕಾರ್ಯಕ್ರಮ ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ವರ್ಷದ ಪಾದಯಾತ್ರೆ 23 ನೇ ವರ್ಷದ್ದಾಗಿದ್ದು ಪ್ರತಿವರ್ಷ ಪಾದಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ, ಈ ಪಾದಯಾತ್ರೆಯ ಮೂಲ ಉದ್ದೇಶ ಜನರಿಗೆ ನಡಿಗೆಯ ಮಹತ್ವವನ್ನು ನೆನಪಿಸುವುದಾಗಿದೆ.
ಪ್ರತಿನಿತ್ಯ ವಾಹನಗಳನ್ನೇ ಸಂಚಾರಿ ಮಾಧ್ಯಮವಾಗಿ ಬಳಸುತ್ತಿರುವ ಈ ಕಾಲದಲ್ಲಿ ಮನುಷ್ಯ ಸಹಜ ನಡಿಗೆಯನ್ನೇ ಮರೆತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ದೂರದ ದೇವಸ್ಥಾನಗಳಿಗೆ ನಡೆದುಕೊಂಡು ಹೋಗುವುದರ ಮೂಲಕ ಭಕ್ತಿಯ ಜೊತೆಗೆ ಜನರು ತಮ್ಮ ಶಕ್ತಿಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಈಗ ನಡೆಯದೆ ವಾಹನಗಳಿಗೆ ದಾಸರಾಗಿ ನಾನಾ ಖಾಯಿಲೆಗಳಿಗೆ ತುತ್ತಾಗಿ ಪರಿಸರ ಮಾಲಿನ್ಯಕ್ಕೂ ಕಾರಣರಾಗಿದ್ದೇವೆ. ಈ ವಿಷಯದಲ್ಲಿ ಜಾಗೃತಿಗಾಗಿ ಈ ಪಾದಯಾತ್ರೆ ಆಯೋಜಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.. ನಾಗದಳ ಸಂಚಾಲಕರಾದ ಸಿ.ನಟರಾಜ್ ಮೊ: 9886861288 ಸುಂಸು. ಬದರಿನಾಥ್ ಮೊ: 9242143140
Comments