ಬಿಗ್ ಬ್ರೇಕಿಂಗ್: ಜೆಡಿಎಸ್ ಮಹಿಳಾ ಘಟಕಕ್ಕೆ ದೇವೆಗೌಡರು ಸೂಚಿಸಿದ್ದು ಇವರನ್ನೆ..!!!
ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು, ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಜೆಡಿಎಸ್ಗೆ ಸೇರುತ್ತದೆ. ಆದರೆ, ಜೆಡಿಎಸ್’ನ ಮಹಿಳಾ ಘಟಕಕ್ಕೆ 10 ತಿಂಗಳಿಂದ ಯಾವ ಸಾರಥಿಯು ಇರಲಿಲ್ಲ ಎಂಬುದೇ ವಿಪರ್ಯಾಸ.
ರಿಯಲ್ಎಸ್ಟೇಟ್ ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾದ ಆರೋಪದ ಹಿನ್ನಲೆಯಲ್ಲಿ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿದ್ದ ಅರ್ಷಿಯಾ ಆಲಿ ಬಂಧನದಿಂದ ಆ ಹುದ್ದೆ ಖಾಲಿಯಾಗಿತ್ತು..ತೆರವಾಗಿದ್ದ ಹುದ್ದೆಗೆ ಇದುವರೆಗೆ ಯಾರನ್ನೂ ಕೂಡ ನೇಮಕ ಮಾಡಿಲ್ಲ. ಬಿಜೆಪಿ ಮಹಿಳಾ ಘಟಕ ಕ್ರಿಯಾಶೀಲ ವಾಗಿದೆ. ಕಾಂಗ್ರೆಸ್ ಕೂಡ ಇತ್ತೀಚೆಗೆ ಪುಷ್ಪಾ ಅಮರನಾಥ್ ಅವರನ್ನು ಮಹಿಳಾ ಘಟಕಕ್ಕೆ ನೇಮಕ ಮಾಡಿತ್ತು... ಜೆಡಿಎಸ್ ಕೂಡ ಮಹಿಳಾ ಘಟಕದ ಅಧ್ಯಕ್ಷೆ ನೇಮಕ ಮಾಡಲು ಸಾರಥಿಯ ಹುಡುಕಾಟವನ್ನು ನಡೆಸಿದೆ. ಐಆರ್ಎಸ್ ನಿವೃತ್ತ ಅಧಿಕಾರಿ, ಮಂಡ್ಯ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀ ಅಶ್ವಿನ್ಗೌಡ, ಪದ್ಮಾವತಿ ಗಂಗಾಧರ ಗೌಡ, ಬಿ.ಎಸ್. ಕನ್ಯಾಕುಮಾರಿ, ಶಿವಮೊಗ್ಗದ ಶಾಂತಾ ಸುರೇಂದ್ರ ಹೆಸರು ರೇಸ್ನಲ್ಲಿವೆ.. ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳಾ ಘಟಕಗಳಿಗೆ ಪೈಪೋಟಿ ನೀಡಲು ಲಕ್ಷ್ಮೀ ಅಶ್ವಿನ್ ಗೌಡರರು ಸಮರ್ಥರು ಎಂಬುದು ದೇವೇಗೌಡರ ಅಭಿಪ್ರಾಯವಾಗಿದೆ.
Comments