ಕುತೂಹಲ ಕೆರಳಿಸಿದ ಅಪ್ಪ-ಮಕ್ಕಳ ನಡೆ: ಜೆಡಿಎಸ್’ನಿಂದ ಹೊಸ ಗಾಳ..!!

ಕಳೆದ ಹಲವು ತಿಂಗಳಿಂದ ಮುಂದೆ ಹಾಕುತ್ತಾ ಬಂದಿರುವಂತಹ ಕರ್ನಾಟಕ ರಾಜ್ಯದ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್’ಗೆ ಇದೀಗ ಗ್ರೀನ್ ಸಿಗ್ನಲ್ ನೀಡಿದೆ. ಕಾಂಗ್ರೆಸ್’ನಲ್ಲಿ ಹಿಂದೆ ಇದ್ದ ಇಬ್ಬರು ಹಾಲಿ ಸಚಿವರಿಗೆ ಕೈ ಕೊಟ್ಟು ಎಂಟು ಸಚಿವರಿಗೆ ಮಂತ್ರಿ ಭಾಗ್ಯ ಕಲ್ಪಿಸಿದ್ದು ಶನಿವಾರ ಸಂಜೆ ನೂತನ ಸಚಿವರ ಪ್ರಮಾಣ ವಚನ ನಡೆದಿದೆ..
23 ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ನ ಕೆಲ ಶಾಸಕರು ಮಂತ್ರಿಗಿರಿ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದಾರೆ. ಅದರಲ್ಲೂ ಬಿ.ಸಿ. ಪಾಟೀಲ್ ಹಾಗೂ ಹಿರಿಯ ಶಾಸಕ ರಾಮಲಿಂಗರೆಡ್ಡಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಜೆಡಿಎಸ್ ಪಕ್ಷ ವಾಸ್ತು ಮೊರೆ ಹೋಗಿದ್ದು, ಜೆಡಿಎಸ್ ನಿಂದ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಈ ಮೊದಲೇ ಜೆಡಿಎಸ್ ಹೇಳಿದಾಗೆ ಶೂನ್ಯ ಮಾಸದಲ್ಲಿ ನಮ್ಮದು ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಹೇಳಿತ್ತು. ಹಾಗಾಗಿ ಜೆಡಿಎಸ್ ಅಗತ್ಯವಿದ್ದಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದಾರೆ.
Comments