ಖಾಲಿ ಇರುವ ಎರಡು ಸ್ಥಾನ ಭರ್ತಿ ಮಾಡಲು ಸಿಎಂ ಕುಮಾರಸ್ವಾಮಿಗೆ ದೊಡ್ಡಗೌಡರು ಸೂಚಿಸಿದ್ದು ಯಾರ ಹೆಸರನ್ನ ಗೊತ್ತಾ..?
ಸಚಿವ ಸಂಪುಟ ವಿಸ್ತರಣೆ ಅಂದು ಕೊಂಡಂತೆ ಆಗಿದ್ದರೆ ಡಿಸೆಂಬರ್ 22ಕ್ಕೆ ಆಗುತ್ತಿತ್ತು. ಆದರೆ ಕೆಲವೊಂದು ಕಾರಣಗಳಿಂದ ಸಚಿವ ಸಂಪುಟ ವಿಸ್ತರಣೆಗೆ ಮತ್ತೊಂದು ದಿನ ನಿಗದಿಯಾಗಿದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿ ದಿನಾಂಕ ಬದಲಾಗಿರುವುದು ಹೊಸದೇನಲ್ಲ.
ಚುನಾವಣೆ ಹತ್ತಿರ ಬರುತ್ತಿರುವುದರಿಂದ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಗೌಡ್ರು, ಖಾಲಿ ಎರಡು ಸ್ಥಾನವನ್ನು ಭರ್ತಿ ಮಾಡಲು ಕುಮಾರಸ್ವಾಮಿಗೆ ಈಗಾಗಲೇ ಸೂಚನೆಯನ್ನು ನೀಡಿದ್ದಾರೆ.. ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿ ಮತ್ತು ಮಂಗಳೂರಿನ ಶ್ರೀಮಂತ ಉದ್ಯಮಿ, ಶಾಸಕ ಬಿ ಎಂ ಫಾರೂಖ್ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಅಷ್ಟೆ ಅಲ್ಲದೆ ಇದಕ್ಕೆ ಕುಮಾರಸ್ವಾಮಿಯವರ ಒಪ್ಪಿಗೆ ಕೂಡಾ ಇದೆ ಎಂದು ಹೇಳಲಾಗುತ್ತಿದೆ.
Comments