ಮಾರಮ್ಮ ದೇವಿಯ ಪ್ರಸಾದದಲ್ಲಿದ್ದ ಅಂಶದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ನಾಯಕ..!!

ಕಿಚ್ಚುಗತ್ತಿ ಮಾರಪ್ಪ ದೇವಸ್ಧಾನದ ವಿಷ ಪ್ರಸಾದವನ್ನು ತಿಂದು ಮನುಷ್ಯರಷ್ಟೆ ಅಲ್ಲ.. ಪಕ್ಷಿಗಳು ಕೂಡ ಸಾವನ್ನಪಿದ್ದವು. ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ತಿಳಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇವರ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆತಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. 10 ರಿಂದ 12 ಅಧಿಕಾರಿಗಳಿಂದ ತನಿಖೆ ಕೂಡ ನಡೆಯುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಸಾಕಷ್ಟು ಸುಳಿವು ಸಿಕ್ಕಿದೆ ಆದರೆ ತನಿಖೆ ದೃಷ್ಟಿಯಿಂದ ಅವುಗಳನ್ನು ಹೇಳಲು ಸಾಧ್ಯವಾಗುವುದಿಲ್ಲ ಅಂತ ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಆರ್ಗನೋಫಾಸ್ಪರಸ್ ಅಂಶವುಳ್ಳ ವಿಷವನ್ನು ಬೆರೆಸಲಾಗಿದೆ ಎಂದು ತಿಳಿಸಿದರು.
Comments