ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಕೊಟ್ರು ಭರ್ಜರಿ ಗಿಫ್ಟ್..!! ಏನ್ ಗೊತ್ತಾ..?
ರಾಜ್ಯ ಸರ್ಕಾರದ ಸಿಎಂ ಕುಮಾರಸ್ವಾಮಿಯವರು ನೆನ್ನೆ ಅಷ್ಟೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಅಪ್ಪನ ಬರ್ತ್ ಡೇ ಗೆ ನಿಖಿಲ್ ಅಭಿನಯದ ಸ್ಯಾಂಡಲ್ ವುಡ್’ನ ಬಹುನಿರೀಕ್ಷಿತ ಸಿನಿಮಾವಾದ ಸೀತಾರಾಮ ಕಲ್ಯಾಣ ಚಿತ್ರ 'ಓ ಜಾನು..' ಎಂಬ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.
ಅನೂಪ್ ರುಬಿನ್ಸ್ ಸಂಗೀತ ನೀಡಿರುವ ಹಾಡಿಗೆ ಕೆ ಕಲ್ಯಾಣ್ ಸಾಹಿತ್ಯವನ್ನು ಬರೆದಿದ್ದಾರೆ. ಕುಮಾರಸ್ವಾಮಿ ಜನ್ಮದಿನದಂದೇ ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿತ್ತು... ಈ ಹಾಡಿಗೆ ಯೂ ಟ್ಯೂಬ್ ನಲ್ಲಿ ಸಖತ್ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಇನ್ನು, ಅಪ್ಪನ ಬರ್ತ್ ಡೇ ನಿಮಿತ್ತ ನಿಖಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದು, ನೀವೇ ನನ್ನ ಹೀರೋ. ಲವ್ ಯೂ ಅಪ್ಪ ಎಂದಿದ್ದಾರೆ. ಅಪ್ಪ ಮಗನ ಸಂಬಂಧ ಎಷ್ಟು ಭಾವನಾತ್ಮಕವಾಗಿದೆ ಎಂಬುದು ಇದರಲ್ಲೆ ತಿಳಿಯುತ್ತದೆ.
Comments