45ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಂಡಲ ಪೂಜಾ ಉತ್ಸವ ಕಾರ್ಯಕ್ರಮ






ನಗರದ ಡಿ’ಕ್ರಾಸ್ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 16-12-2018 ಇಂದು 45ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ ನೆಡೆಯಿತು, ಬೆಳಿಗ್ಗೆ 5 ಘಂಟೆಗೆ ಆಗಮ ಪ್ರವೀಣ ಶಿವಶಂಕರಾಚಾರ್ಯ ಮತ್ತು ಸಂಗಡಿಗರಿಂದ ಶ್ರೀ ಗಣಹೋಮ, ಬೆಳಿಗ್ಗೆ 11 ಘಂಟೆಗೆ ಶ್ರೀ ಅಯ್ಯಪ್ಪಸ್ವಾಮಿ ಭಜನೆ, ಮಧ್ಯಾನ್ಹ 12 ಘಂಟೆಗೆ ಷ||ಬ್ರ|| ಶ್ರೀ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡಿದರು, ಮಧ್ಯಾನ್ಹ 1 ಘಂಟೆಗೆ ಮಹಾಮಂಗಳಾರತಿ ಮತ್ತು ಶಾಸ್ತ ಪ್ರೀತಿ ಅನ್ನಸಂತರ್ಪಣೆ ನೆಡೆಯಿತು, ಸಂಜೆ 4 ಘಂಟೆಗೆ ಪಾಲಕುಂಭ ಸಮೇತ ದೀಪಾಲಂಕೃತ ರಥದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯವರ ಉತ್ಸವ ಕೇರಳದ ತ್ರಿಶೂರಿನಲ್ಲಿರುವ ವಲ್ಲುವನಾಡ್ ಕಣ್ಣನ್ ಕಮ್ಯೂನಿಕೇಷನ್ ಮತ್ತು ಶ್ರೀ ನಂದನ್ ಕಲಾರೂಪಂ ರವರಿಂದ ಚಂಡೆವಾದ್ಯ ಹಾಗೂ ದೇವರುಗಳ ವೇಷಭೂಷಣ ಪ್ರದರ್ಶನದೊಂದಿಗೆ ವಿಜೃಂಭಣೆಯಿಂದ ನೆಡೆಯಿತು.
ಹೇಮಾವತಿಪೇಟೆಯ ವರ್ತಕರಿಂದ ಬಿಸಿ ಬಾದಾಮಿ ಹಾಲಿನ ಸೇವೆ, ಕೆ.ಎನ್.ಎನ್. ಕಾಂಪ್ಲೆಕ್ಸ್ ನಲ್ಲಿ ಕೋಟೆರಸ್ತೆಯ ಭಕ್ತಾದಿಗಳು ಹಾಲಿನ ಸೇವೆ, ವೀರಭದ್ರಪ್ಪನಪೇಟೆಯಲ್ಲಿ ಶ್ರೀ ವಿಘ್ನೇಶ್ವರ ಅಂತರಂಗ ಗೆಳೆಯರ ಬಳಗದಿಂದ ಪ್ರಸಾದ ಮತ್ತು ಹಾಲಿನ ಸೇವೆ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು, ಅಯ್ಯಪ್ಪ ಮಾಲಾಧಾರಿಗಳು, ಜ್ಯೋತಿ ಹಿಡಿದ ಹೆಣ್ಣು ಮಕ್ಕಳು, ಭಕ್ತಾದಿಗಳು ಉತ್ಸವದ ಜೊತೆಯಲ್ಲಿದ್ದರು, ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
Comments