ಬದುಕಿರುವವರೆಗೆ ಎಚ್‌ಡಿಕೆಯೊಂದಿಗೆ ಜಗಳ ಆಡುವ ಪ್ರಶ್ನೆಯೆ ಇಲ್ಲ ಎಂದ ಈ ಶಾಸಕ..!! ಯಾರ್ ಗೊತ್ತಾ..?

ರಾಜಕೀಯದಲ್ಲಿ ಜಗಳಗಳು ಕಿತ್ತಾಟಗಳು ಎಲ್ಲವೂ ಕೂಡ ಕಾಮನ್… ಆದರೆ 'ಬದುಕಿರುವ ವರೆಗೆ ನನ್ನ ಕುಮಾರಸ್ವಾಮಿ ನಡುವೆ ಜಗಳ ಆಗುವುದಿಲ್ಲ. ಅವರೊಂದಿಗೆ ಜಗಳವಾಡಿಕೊಳ್ತೀನಿ ಅಂದರೆ ಅದು ನಿಮ್ಮ ಭ್ರಮೆ' ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.
ಕಳೆದ ಗುರುವಾರ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು' ನಾನು ಮುಖ್ಯಮಂತ್ರಿ ಆಕಾಂಕ್ಷಿನೂ ಅಲ್ಲ. ದೇವೇಗೌಡರು ನಮ್ಮ ನಾಯಕರು,ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಬೇಕಾದ್ರೆ ಮುಖ್ಯಮಂತ್ರಿಗಳು ಕೆಲಸ ಮಾಡು ಅಂದ್ರೆ ಮಾಡುತ್ತೇನೆ. ಅವರಿಗೆ ಬಲಭುಜವಾಗಿ ನಿಲ್ಲತ್ತೇನೆ' ಎಂದು ತಿಳಿಸಿದರು..
Comments