ಹೆಣ್ಣುಮಕ್ಕಳು ಬಳೆತೊಟ್ಟು ಮನೆ ಕೆಲಸ ಮಾಡುವುದಷ್ಟೇ ಅಲ್ಲ...ಹೋರಾಟಕ್ಕೂ ಸೈ ...ವಿದ್ಯಾರ್ಥಿನಿ ಜ್ಯೋತಿ
ದಿನಾಂಕ 14-12-2018 ರ ಶುಕ್ರವಾರ ಬೆಳಿಗ್ಗೆ 10 ಘಂಟೆಯಿಂದ 12 ಘಂಟೆಯವರೆಗೆ ನಾಗರೀಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಆತ್ಮ ಸ್ಥೈರ್ಯ ತುಂಬಲು ಏರ್ಪಡಿಸಲಾಗ್ಗಿದ್ದ ಜಾಗೃತಿ ಜಾಥಾದಲ್ಲಿ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಎರಡನೆ ಪಿಯೂ ವಿದ್ಯಾರ್ಥಿನಿ ಜ್ಯೋತಿ ಮಾತನಾಡಿ ಈಗಿನ ಹೆಣ್ಣುಮಕ್ಕಳು ಬಳೆತೊಟ್ಟು ಮನೆ ಕೆಲಸ ಮಾಡುವುದಷ್ಟೇ ಸೀಮಿತವಾಗಿಲ್ಲ...ದೌರ್ಜನ್ಯದ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಸಿದ್ದಳಾಗಿದ್ದಾಳೆ, ನಾನೂ ಕೂಡ ಹಳ್ಳಿಯಿಂದ ಪ್ರತಿದಿನ ಕಾಲೇಜಿಗೆ ಬರುತ್ತೇನೆ, ಇತ್ತೇಚೆಗೆ ಹೆಣ್ಣುಮಕ್ಕಳ ಮೇಲೆ ಹಲವಾರು ರೀತಿಯ ದೌರ್ಜನ್ಯ, ಶೋಷಣೆ ಹೆಚ್ಚಾಗುತ್ತಿದೆ, ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಯಾವುದೇ ರೀತಿಯ ರಕ್ಷಣೆ ಇಲ್ಲವಾಗಿದೆ, ಮೊನ್ನೆಯಷ್ಟೇ ಒಂದು ಹೆಣ್ಣು ಮಗಳ ಹತ್ಯೆಯಾಗಿದೆ, ಆಕೆಯೆ ತಂದೆತಾಯಿಗಳ ನೋವನ್ನು ನಿವಾರಿಸುವವರು ಯಾರು? ಶೋಷಣೆ ಮಾಡಿದವರು ಯಾವುದೇ ರೀತಿಯ ಶಿಕ್ಷೆಯಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ, ಇದು ನಿಲ್ಲಬೇಕು, ತಪ್ಪುಮಾಡಿದವರಿಗೆ ಕೋಡಲೇ ಶಿಕ್ಷೆಯಾಗುವಂತೆ ಕಾನೂನನ್ನು ರೂಪಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡರಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರ ಪರವಾಗಿ ಮನವಿ ಮಾಡಿದಳು.
ನಗರದ ಆತ್ರೇಯ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಸಂದೀಪ್ ಮಾತನಾಡಿ ಬಹಳಷ್ಟು ತಾಯಂದಿರು ಆಸ್ಪತ್ರೆಗೆ ಬಂದು ಮನೆಯಲ್ಲಿ ತುಂಬಾ ಒತ್ತಡವಿದೆ, ಹೆಣ್ಣು ಭ್ರೂಣ ಹತ್ಯೆಮಾಡಿ ಎಂದು ಕೇಳಿಕೊಳ್ಳುತ್ತಾರೆ, ಇದು ನಿಲ್ಲಬೇಕು ಹೆಣ್ಣಾದರೇನಂತೆ ಆಕೆಯನ್ನು ಬೆಳೆಸಿ ಸುಶಿಕ್ಷಿತೆಯನ್ನಾಗಿಮಾಡಿ ಎಂದು ಆಗ್ರಹಿಸಿದರು. ಮಹಿಳಾ ಸಮಾಜ ಅಧ್ಯಕ್ಷೆ ಕೆ.ಎಸ್.ಪ್ರಭ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ, ಗ್ರಾಮೀಣ ಅಭ್ಯದಯ ಸೇವಾ ಸಂಸ್ಥೆ ಕಾರ್ಯದರ್ಶಿ ಅಮಲಿನಾಯಕ್, ಸಾಹಿತಿ ಎಂ.ಜಿ. ಚಂದ್ರಶೇಕರಯ್ಯ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಾಂತ ಶಾಲಾ ಕಾಲೇಜಿನ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ,ಅತ್ಯಾಚಾರ ಹೆಚ್ಚುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಪ್ರತಿನಿತ್ಯ ಓಡಾಡಬೇಕಾಗಿರುವುದರಿಂದ ಸುರಕ್ಷಿತ ವಾತಾವರಣ ಇಲ್ಲವಾಗಿದೆ, ನಾಗರೀಕರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕೆಂದು ತಿಳಿಯದಾಗಿದೆ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ ಎಂದರು. ಕಳೆದ ಹತ್ತುದಿನಗಳ ಹಿಂದೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬೆಳಿಗ್ಗೆಯ ಹೊತ್ತಿನಲ್ಲೇ ಮೊಚ್ಚಿನಿಂದ ಕೊಚ್ಚಿ ಶಾಲೆಗೆ ಹೋಗುವ ಸಮಯದಲ್ಲಿ ಹತ್ಯೆ ಮಾಡಲಾಗಿತ್ತು, ಈ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬಲು ಶುಕ್ರವಾರದಂದು ಜಾಥಾ ಹಮ್ಮಿಕೊಳ್ಳಲಾಗಿತ್ತು, ಈ ಕುರಿತಂತೆ ಮನವಿಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಕರೀಗೌಡ ಹಾಜರಾಗಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿ ಪತ್ರದಲ್ಲಿರುವುದನ್ನು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಲ್ಲೂಕು ದಂಡಾಧಿಕಾರಿ ಬಿ.ಎ.ಮೋಹನ್ ಹಾಜರಿದ್ದರು. ನೆಲದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಗದಿಂದ ಹೊರಟ ಮೆರವಣಿಗೆಯು ಹಳೇ ಬಸ್ ನಿಲ್ದಾಣದ ಮೂಲಕ ಚೌಕ, ರುಮಾಲೆ ವೃತ್ತದ ಮೂಲಕ ಹಾದು ತಾಲ್ಲೂಕು ಕಛೇರಿ ರಸ್ತೆಯಲ್ಲಿ ಸಾಗಿ ತಲ್ಲೂಕು ಕಛೇರಿಗೆ ಆಗಮಿಸಿದರು, ದಾರಿಯುದ್ದಕ್ಕೂ ಹೆಣ್ಣು ಮಕ್ಕಳಿಗಾಗುತ್ತಿರುವ ದೌರ್ಜ್ಯನ್ಯದ ವಿರುದ್ಧ ದಿಕ್ಕಾರ ಕೂಗುತ್ತಾ ಸಾಗಿದರು.
ಪ್ರತಿಭಟನೆಯ ನೇತೃತ್ವವನ್ನು ಮಹಿಳಾ ಮತ್ತು ಮಕ್ಕಳ ಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದರು, ಪ್ರತಿಭಟನೆಯಲ್ಲಿ ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ವಿದ್ಯಾರ್ಥಿಗಳು,ನವೋದಯಾ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳು ಮತ್ತು ಸಿಬ್ಬಂದಿ, ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆ ಪದಾಧಿಕಾರಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿ ಪದಾಧಿಕಾರಿಗಳು, ಲಾವಣ್ಯ ವಿದ್ಯಾ ಸಂಸ್ಥೆ ಅದ್ಯಾಪಕರು ಮತ್ತು ವಿದ್ಯಾರ್ಥಿಗಳು, ಪ್ರತಿಭಾ ದೀಪ ಪಬ್ಲಿಕ್ ಸ್ಕೂಲ್, ದೇವರಾಜ ಅರಸ್ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ವಿದ್ಯಾಶಿಲ್ಪ ಸ್ಕೂಲ್ ಸಂಸ್ಥಾಪಕಿ ಎಂ.ಆರ್. ಪದ್ಮ, ಅಭಿನೇತ್ರಿ ನಾಟ್ಯಕಲಾ ಸಂಘದ ರೇವತಿ, ಬೆಂ.ಗ್ರಾ.ಜಿಲ್ಲಾ ಬಾಜಪ ಯುವ ಮೋರ್ಚ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ಉಪಾಧ್ಯಕ್ಷ ಶಿವು, ಮೈತ್ರಿಶ್ರೀ ಸೇವಾ ಸಂಸ್ಥೆ ಪದಾಧಿಕಾರಿ ಗೌರಮ್ಮ, ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘ ಅಧ್ಯಕ್ಷೆ ಎಂ.ಕೆ.ವತ್ಸಲ, ಮಹಿಳಾ ಸಮಾಜ ಕಾರ್ಯದರ್ಶಿ ಎಲ್.ಸಿ.ದೇವಕಿ, ಸದಸ್ಯೆಯರಾದ ನಿರ್ಮಲ, ಕವಿತ, ವರಲಕ್ಷ್ಮಿ, ಯಶೋಧ, ಚಿಲ್ಡ್ರನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾಮಯ್ಯ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಟ್ರಸ್ಟೀ ಕೆ.ವಿ.ಸುಧಾಕರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಅಧ್ಯಕ್ಷೆ ಬಿ.ಎ.ಗಿರಿಜ, ಕರ್ನಾಟಕ ನೇಕಾರ ರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಕುಮರ್, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ. ಬಿ.ಸಿ. ಮತ್ತು ಪದಾಧಿಕಾರಿಗಳು, ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ವತ್ಸಲಾ, ಸದಸ್ಯರಾದ ಗಾಯತ್ರಿ ,ಗೌರಿ, ವಿಶಾಲಾಕ್ಷಿ ,ಮಣಿಯಮ್ಮ, ಹೊಂಗಿರಣ ಮಹಿಳಾ ಸಂಘ, ಪ್ರಿಯದರ್ಶಿನಿ ಮಹಿಳಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ [ಪ್ರವೀಣ್ ಶೆಟ್ಟಿ ಬಣ]ರಾಜ್ಯ ಕಾರ್ಯದರ್ಶಿ,ರಾಜಘಟ್ಟ ರವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭ್ಯುದಯ ಸಂಸ್ಥೆ ಮೇಲ್ವಿಚಾರಕರು ಎಲ್.ಸಿ. ಲಕ್ಷ್ಮಿ ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
Comments