ಬಿಜೆಪಿಗೆ ಶಾಕ್ ಮೇಲೆ ಶಾಕ್ : ಬಿಜೆಪಿಯ ಐವರು ಶಾಸಕರು ಸಿಎಂ ಕುಮಾರಸ್ವಾಮಿ ತೆಕ್ಕೆಯಲ್ಲಿ..!!??
ಬಿಜೆಪಿಗೆ ಶಾಕ್ ಮೇಲೆ ಶಾಕ್ ಆದರೂ ಕೂಡ ಬಿಜೆಪಿ ಯಾಕೋ ಬುದ್ದಿ ಕಲಿತಿರೋ ಆಗಿಲ್ಲ…ಅಧಿವೇಶನ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು 'ಆಪರೇಷನ್ ಕಮಲ'ಕ್ಕೊಳಗಾಗಿ ಪಕ್ಷ ತೊರೆಯಲಿದ್ದಾರೆಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವಾದರೂ ಈಗ ಬಿಜೆಪಿ ನಾಯಕರಿಗೇ ಶಾಕ್ ಆಗುವಂತಹ ಸುದ್ದಿ ಬಹಿರಂಗವಾಗಿದೆ.
ಬಿಜೆಪಿಯ ಐವರು ಶಾಸಕರು ಮೈತ್ರಿಕೂಟದ ಸರ್ಕಾರದ ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೇ ನೇರ ಸಂಪರ್ಕದಲ್ಲಿದ್ದಾರೆಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಚಾರ ಬಿಜೆಪಿ ನಾಯಕರ ಗಮನಕ್ಕೂ ಬಂದಿದ್ದು, ಹೀಗಾಗಿ ಈ ಐದು ಮಂದಿ ಶಾಸಕರ ಮೇಲೆ ನಿಗಾ ಇಟ್ಟಿದ್ದಾರೆನ್ನಲಾಗಿದೆ. ಸದ್ಯಕ್ಕೆ ಅವರುಗಳು ಪಕ್ಷ ತೊರೆಯುವುದಿಲ್ಲವೆಂದು ಹೇಳಲಾಗುತ್ತಿದ್ದರೂ ರಾಜಕಾರಣದಲ್ಲಿ ಯಾವುದೇ ಬೆಳವಣಿಗೆ ಸಂಭವಿಸಬಹುದೆಂಬ ಕಾರಣಕ್ಕೆ ಬಿಜೆಪಿ ನಾಯಕರು ಮುನ್ನೆಚ್ಚರಿಕೆ ವಹಿಸಿದ್ದಾರೆ.. ದೋಸ್ತಿ ಸರ್ಕಾರವು ಮತ್ತಷ್ಟು ಬಲಶಾಲಿ ಅನ್ನೋದು ತಿಳಿದಿದೆ.
Comments