45ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ
ನಗರದ ಡಿ’ಕ್ರಾಸ್ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ದಿನಾಂಕ 16-12-2018 ಭಾನುವಾರದಂದು 45ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ಬೆಳಿಗ್ಗೆ 5 ಘಂಟೆಗೆ ಆಗಮ ಪ್ರವೀಣ ಶಿವಶಂಕರಾಚಾರ್ಯ ಮತ್ತು ಸಂಗಡಿಗರಿಂದ ಶ್ರೀ ಗಣಹೋಮ, ಬೆಳಿಗ್ಗೆ 11 ಘಂಟೆಗೆ ಶ್ರೀ ಅಯ್ಯಪ್ಪಸ್ವಾಮಿ ಭಜನೆ, ಮಧ್ಯಾನ್ಹ 12 ಘಂಟೆಗೆ ಷ||ಬ್ರ|| ಶ್ರೀ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಚನ, ಮಧ್ಯಾನ್ಹ 1 ಘಂಟೆಗೆ ಮಹಾಮಂಗಳಾರತಿ ಮತ್ತು ಶಾಸ್ತ ಪ್ರೀತಿ ಅನ್ನಸಂತರ್ಪಣೆ, ಸಂಜೆ 4 ಘಂಟೆಗೆ ಪಾಲಕುಂಭ ಸಮೇತ ದೀಪಾಲಂಕೃತ ರಥದಲ್ಲಿ ಶ್ರೀ ಅಯ್ಯಪ್ಪಸ್ವಾಮಿಯವರ ಉತ್ಸವ ನೆಡೆಯಲಿದೆ. ಕೇರಳದ ತ್ರಿಶೂರ್, ವಲ್ಲುವನಾಡ್ ಕಣ್ಣನ್ ಕಮ್ಯೂನಿಕೇಷನ್ ಮತ್ತು ಶ್ರೀ ನಂದನ್ ಕಲಾರೂಪಂ ರವರಿಂದ ಚಂಡೆವಾದ್ಯ ಹಾಗೂ ದೇವರುಗಳ ವೇಷಭೂಷಣ ಪ್ರದರ್ಶನ ಇರುತ್ತದೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀ ಅಯ್ಯಪ್ಪಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಕೋರಿದ್ದಾರೆ.
Comments