ಜೆಡಿಎಸ್'ಗೆ ಉಪಸಭಾಪತಿ ಪಟ್ಟ..? ದೇವೆಗೌಡರು ಸೂಚಿಸಿದ್ದು ಯಾರನ್ನು ಗೊತ್ತಾ..?

ವಿಧಾನ ಪರಿಷತ್’ಗೆ ಸಭಾಪತಿ ಹಾಗೂ ಉಪಸಭಾಪತಿ ಆಯ್ಕೆ ನಡೆಯುತ್ತಿದೆ.ವಿಧಾನಪರಿಷತ್ ನೂತನ ಸಭಾಪತಿಯಾಗಿ ಕಾಂಗ್ರೆಸ್‍ನ ಹಿರಿಯ ಮುಖಂಡ ಪ್ರತಾಪ್‍ಚಂದ್ರಶೆಟ್ಟಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉಪಸಭಾಪತಿ ಚುನಾವಣೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.
ಸಭಾಪತಿ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವುದರಿಂದ ಉಪಸಭಾಪತಿ ಹಾಗೂ ವಿಧಾನಪರಿಷತ್‍ನ ಸರ್ಕಾರದ ಮುಖ್ಯಸಚೇತಕ ಸ್ಥಾನವು ಜೆಡಿಎಸ್ ಪಾಲಾಗಲಿದೆ. ಸರ್ಕಾರ ಹಾಗೂ ಪಕ್ಷವನ್ನು ಮುನ್ನಡೆಸುವತ್ತ ಹೆಚ್ಚು ಗಮನ ಹರಿಸಬೇಕೆಂದು ಜೆಡಿಎಸ್ ವರಿಷ್ಠರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚನೆ ಕೊಟ್ಟಿದ್ದಾರೆ.
Comments