ಪಟ್ಟಿಯಿಂದ ನಟ ಅಂಬರೀಶ್ ಹೆಸರು ನಾಪತ್ತೆ : ಮಾಜಿ ಪ್ರಧಾನಿ ದೇವೆಗೌಡರು ಅಸಮಾಧಾನ: ಈ ಬಗ್ಗೆ ಗೌಡರು ಹೇಳಿದ್ದೇನು..?

ಈಗಾಗಲೇ ಸಂಸತ್ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಅಗಲಿದ ಸದಸ್ಯರಿಗೆ ಮೊದಲ ದಿನ ಉಭಯ ಸದನಗಳಲ್ಲಿಯೂ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ಮುಂದೂಡಲಾಯಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ, ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಸೇರಿದಂತೆ ಇತ್ತೀಚೆಗೆ ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಯಿತು. ಸಂತಾಪ ಸೂಚಿ ಪಟ್ಟಿಯಲ್ಲಿ ಎಲ್ಲರ ಹೆಸರು ಇತ್ತು..
ಆದರೆ, ಇತ್ತೀಚಿಗೆ ನಿಧನರಾದ ಕೇಂದ್ರದ ಮಾಜಿ ಸಚಿವ, ನಟ ಅಂಬರೀಶ್ ಅವರ ಹೆಸರನ್ನು ಸಂತಾಪ ಸೂಚಿಸುವ ಪಟ್ಟಿಯಲ್ಲಿ ಮರೆತಿರುವ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡದ ಖ್ಯಾತ ನಟ ಹಾಗೂ ರಾಜಕಾರಣಿ ಅಂಬರೀಶ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಸ್ನೇಹ ಶೀಲ ವ್ಯಕ್ತಿತ್ವದಿಂದ ಅಪಾರ ವಿಶ್ವಾಸ ಗಳಿಸಿರುವ ಅವರು, ಸಹಾಯ ಮಾಡುವಲ್ಲಿ ಕಲಿಯುಗ ಕರ್ಣ ಎನಿಸಿಕೊಂಡಿದ್ದಾರೆ. ಅಂತಹ ಮೇರು ವ್ಯಕ್ತಿತ್ವಕ್ಕೆ ಲೋಕಸಭೆಯಲ್ಲಿ ಸಂತಾಪ ಸೂಚಿಸದಿರುವ ಕುರಿತು ಕರ್ನಾಟಕ ಸಂಸದರು ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಹೆಚ್ ಡಿ ದೇವೆಗೌಡರು ಅಸಮಾಧಾನಗೊಂಡಿದ್ದಾರೆ.
Comments