ಸಿಎಂ ಕುಮಾರಸ್ವಾಮಿಯವರ ಬೆನ್ನಿಗೆ ನಿಂತ ‘ಕೈ’ ಶಾಸಕ..!! ಶಾಸಕ ಯಾರ್ ಗೊತ್ತಾ..?
ಮಾಜಿ ಮುಖ್ಯಮಂತ್ರಿ ಬಿಎಸ್ ‘ವೈ ಗೆ ಡಿಕೆಶಿ ಸಖತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜಕೀಯ ಮುಖಂಡರುಗಳ ನಡುವೆಯೂ ಮಾತಿನ ಸಮರ ಪ್ರಾರಂಭವಾಗಿದೆ. ಒಂದೆಡೆ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಇನ್ನೊಂದೆಡೆ ಬಿಎಸ್ ವೈ ವಿರುದ್ದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ದ ಡಿಕೆಶಿ ಸಖತ್ತಾಗಿಯೇ ತಿರುಗೇಟು ನೀಡಿದ್ದಾರೆ. ವಿರೋಧ ಪಕ್ಷದಲ್ಲಿದ್ದವರು ಬರೀ ವಿರೋಧವನ್ನೆ ಮಾಡುತ್ತಾರೆ ಹೊರತು ಬೇರೆ ಏನು ಕೆಲಸ ಮಾಡುವುದಿಲ್ಲ.. ಕೇವಲ ಲೇವಡಿ ಮಾಡಿಕೊಂಡು ಕಾಲ ಕಳೆಯುತ್ತಾರೆ, ಸುಮ್ದನೆ ಕಾಲಹರಣ ಮಾಡುವುದ ಬಿಟ್ಟು ಜನರ ಸಮಸ್ಯೆಗಳನ್ನು ಆಲಿಸಲಿ ಎಂದು ಡಿಕೆಶಿ ಸಖತ್ತಾಗಿಯೇ ಟಾಂಗ್ ನೀಡಿದ್ದಾರೆ.
Comments