ಮಹಿಳಾ ಮತ್ತು ಮಕ್ಕಳ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಜಾಗೃತಿ ಜಾಥ
ದಿನಾಂಕ 14-12-2018 ರ ಶುಕ್ರವಾರ ಬೆಳಿಗ್ಗೆ 10 ಘಂಟೆಯಿಂದ 12 ಘಂಟೆಯವರೆಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆತ್ಮ ಸ್ಥೈರ್ಯ ತುಂಬಲು ಜಾಗೃತಿ ಜಾಥ ಆಯೋಜಿಸಲಾಗಿದೆ, ಈ ಸಂಬಂಧವಾಗಿ ಬೆಂಗಳೂರು ಗ್ರಾಮಂತರ ಜಿಲ್ಲಾಧಿಕಾರಿಗಳನ್ನು ಒಕ್ಕೂಟದ ವತಿಯಿಂದ ಇಂದು ಬೆಳಿಗ್ಗೆ ೯ ಘಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಹಿಳಾ ಸಮಾಜ ಅಧ್ಯಕ್ಷೆ ಕೆ.ಎಸ್.ಪ್ರಭ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ, ಗ್ರಾಮೀಣ ಅಭ್ಯದಯ ಸೇವಾ ಸಂಸ್ಥೆ ಕಾರ್ಯದರ್ಶಿ ಅಮಲಿನಾಯಕ್, ಭೇಟಿಯಾಗಿ ಇತ್ತೀಚೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಾಂತ ಶಾಲಾ ಕಾಲೇಜಿನ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ,ಅತ್ಯಾಚಾರ ಹೆಚ್ಚುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಪ್ರತಿನಿತ್ಯ ಓಡಾಡಬೇಕಾಗಿರುವುದರಿಂದ ಸುರಕ್ಷಿತ ವಾತಾವರಣ ಇಲ್ಲವಾಗಿದೆ.
ಕಳೆದ ಹತ್ತುದಿನಗಳ ಹಿಂದೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಬೆಳಿಗ್ಗೆಯ ಹೊತ್ತಿನಲ್ಲೇ ಮೊಚ್ಚಿನಿಂದ ಕೊಚ್ಚಿ ಶಾಲೆಗೆ ಹೋಗುವ ಸಮಯದಲ್ಲಿ ಹತ್ಯೆ ಮಾಡಲಾಗಿದೆ, ನಾಗರೀಕರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕೆಂದು ತಿಳಿಯದಾಗಿದೆ, ಈ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ತುಂಬಲು ಶುಕ್ರವಾರದಂದು ಜಾಥಾ ಹಮ್ಮಿಕೊಳ್ಳಲಾಗಿದೆ, ಈ ಕುರಿತಂತೆ ಮನವಿಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿಗಳು ಖುದ್ದು ಹಾಜರಿರಬೇಕೆಂದು ಜಿಲ್ಲಾಧಿಕಾರಿ ಕರೀಗೌಡರಿಗೆ ಮನವಿ ಸಲ್ಲಿಸಲಾಯಿತು. ಮೈತ್ರಿಶ್ರೀ ಸೇವಾ ಸಂಸ್ಥೆ ಪದಾಧಿಕಾರಿ ಗೌರಮ್ಮ, ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘ ಅಧ್ಯಕ್ಷೆ ಎಂ.ಕೆ.ವತ್ಸಲ, ಮಹಿಳಾ ಸಮಾಜ ಕಾರ್ಯದರ್ಶಿ ಎಲ್.ಸಿ.ದೇವಕಿ, ಸದಸ್ಯೆ ನಿರ್ಮಲ, ಚಿಲ್ಡ್ರನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾಮಯ್ಯ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯದರ್ಶಿ ಆರೂಡಿ ರಮೇಶ್, ಟ್ರಸ್ಟೀ ಕೆ.ವಿ.ಸುಧಾಕರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಅಧ್ಯಕ್ಷೆ ಬಿ.ಎ.ಗಿರಿಜ ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
Comments