ವಿಪಕ್ಷಗಳ ಪ್ಲ್ಯಾನ್’ನಿಂದ ತಪ್ಪಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್..!! ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮೈತ್ರಿ ಸರ್ಕಾರ ಸಿದ್ದ..!!!

ಒಂದು ಕಡೆ ಸಮ್ಮಿಶ್ರ ಸರ್ಕಾರವು ಚಳಿಗಾಲದ ಅಧಿವೇಶನಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ… ಮತ್ತೊಂದು ಕಡೆ ಅಧಿವೇಶನದಲ್ಲಿ ಸರ್ಕಾರದ ಉರುಳಿಸಲು ವಿಪಕ್ಷಗಳು ಹಾಗೂ ರೈತ ಸಂಘಟನೆಗಳೂ ಸಹ ಸಜ್ಜಾಗಿವೆ. ಈ ಎಲ್ಲಾ ರೀತಿಯ ಕಷ್ಟಗಳಿಂದ ಪಾರಾಗಲು ಮೈತ್ರಿ ಪಕ್ಷಗಳ ನಾಯಕರು ಕೂಡ ಅಷ್ಟೇ ಕಸರತ್ತು ನಡೆಸಿದ್ದು, ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷವನ್ನ ಸುಸೂತ್ರವಾಗಿ ನಿಭಾಯಿಸಲು ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಕೆಲ ರಣತಂತ್ರಗಳನ್ನ ರೂಪಿಸಿದ್ದಾರೆ.
ಮೈತ್ರಿ ಸರ್ಕಾರಕ್ಕೆ ಎದುರಾಗಲಿರೋ ಸಂಕಷ್ಟ ನಿವಾರಣೆಗೆ ಸಿಎಂ ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದು, ರೈತರ ಎಲ್ಲಾ ರೀತಿಯ ಸಮಸ್ಯೆಗಳಿಗೂ ಮುಂದಿನ ಬಜೆಟ್ ನಲ್ಲಿ ಉತ್ತರ ಸಿಗಲಿದೆ ಎನ್ನೋ ಮೂಲಕ ಬೀಸೋ ದೊಣ್ಣೆಯಿಂದ ಪಾರಾಗುವ ಮಾಸ್ಟರ್ ಪ್ಲ್ಯಾನ್ ಅನ್ನು ಕುಮಾರಸ್ವಾಮಿ ಮಾಡಿದ್ದಾರೆ. ಬೆಳಗಾವಿಯ ಸುವರ್ಣ ಸೌಧದದಲ್ಲಿ ಇದೇ ಡಿಸೆಂಬರ್ 10ರಿಂದ ಡಿ.21ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಏನೆಲ್ಲ ನಡೆಯುತ್ತೋ ಎನ್ನುವುದನ್ನ ಕಾದುನೋಡಬೇಕಿದೆ. ಒಟ್ಟಾರೆ ವಿಪಕ್ಷಗಳ ಪ್ಲ್ಯಾನಿಗೆ ಕುಮಾರಸ್ವಾಮಿ ಸಖತ್ ಫ್ಲ್ಯಾನ್ ಮಾಡಿದ್ದಾರೆ…
Comments