ರೈತರ ಸಾಲ ಮತ್ತು ಬಡ್ದಿಯನ್ನು ನಾವೇ ಕಟ್ಟುತ್ತೇವೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ

08 Dec 2018 5:50 PM |
677 Report

ಡಿ.8 ರ ಇಂದು ಮಧ್ಯಾನ್ಹ 4 ಘಂಟೆಗೆ ದೊಡ್ದಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನೆಡೆದ ಬೃಹತ್ ಸಮಾರಂಭದಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ದಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಬಂಡೆಪ್ಪ ಕಾಶೆಂಪುರ್, ಎಂ.ಸಿ.ಮನಗೂಳಿ. ಎನ್.ಹೆಚ್. ಶಿವಶಂಕರರೆಡ್ಡಿ, ಸಾರಾ.ಮಹೇಶ್, ಸಂಸದ ಎಂ.ವೀರಪ್ಪಮೊಯಿಲಿ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ ಉಪಸ್ಥಿತರಿದ್ದರು.

ಜಲಸಂಪಲ್ಮೂನ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿ ರೈತರ ಋಣ ತೀರಿಸಲು ಕೇಂದ್ರ ಸರ್ಕಾರ ಸಹಕಾರ ನೀಡಲಿಲ್ಲ, ಇಬ್ಬರೂ ರೈತರ ಸಾಲವನ್ನು ಅರ್ಧ ಹಂಚಿಕೊಳ್ಳೋಣ ಎಂದರೆ ಬಿಜೆಪಿಯವರು ಕಿಂಚತ್ತೂ ಮನಸ್ಸು ಮಾಡಲಿಲ್ಲ ಎಂದು ದೂರಿ, ಎಲ್ಲ ಧರ್ಮದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ನಮ್ಮ ಧ್ಯೇಯ ಎಂದರು. ಸಚಿವ ಶಿವಶಂಕರರೆಡ್ಡಿ ಮಾತನಾಡಿ ಈ ಭಾಗದಲ್ಲಿ ನೀರಾವರಿ ವ್ಯವಸ್ಥೆ ಕಡಿಮೆ ಇದೆ, ಆದಕಾರಣ ರೈತರು ಇಸ್ರೇಲ್ ಮಾದರಿ ಕೃಷಿ ಅಳವಡಿಸಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದೇವೆ, ಐದು ವರ್ಷಗಳ ಕಾಲ ಈ ಸಮ್ಮಿಶ್ರ ಸರ್ಕಾರ ಪೂರ್ಣವಾಗಿ ರೈತರ ಪರವಾಗಿ ಕೆಲಸಮಾಡಲಿದೆ ಎಂದರು. ಸಾಂಕೇತಿಕವಾಗಿ ಐದು ಜನ ರೈತರಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಋಣಮುಕ್ತ ಪತ್ರ ವಿತರಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ ರೈತರ ಸಾಲಮನ್ನಾ ಮಾಡುವುದು ಈ ಸಮ್ಮಿಶ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ, ಯಾರೆಲ್ಲಾ ಈ ಯೋಜನೆಯ ಕಾರ್ಯ ರೂಪದ ಬಗ್ಗೆ ವ್ಯಂಗವಾಗಿ ಮಾತನಾಡುತ್ತಿದ್ದರೋ, ಸಂಶಯ ವ್ಯಕ್ತಪಡಿಸುತ್ತಿದ್ದರೋ ಅವರೆಲ್ಲರಿಗೂ ದೊಡ್ಡಬಳ್ಳಾಪುರದ ಈ ಕಾರ್ಯಕ್ರಮದಿಂದ ಸ್ಪಷ್ಟ ಉತ್ತರ ನೀಡಿದ್ದೇವೆ, ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದಿರುವ ರಾಜ್ಯದ ಇಪ್ಪತ್ತೊಂದು ಲಕ್ಷ ರೈತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ, ಕಾಲಾನುಕ್ರಮವಾಗಿ ಈ ಎಲ್ಲ ರೈತರ ಸಾಲದ ಋಣಮುಕ್ತ ಪತ್ರ ನೀಡಲಾಗುವುದು ಎಂದರು. ಮಾತನಾಡಿದ ಎಲ್ಲ ನಾಯಕರೂ ಕೇಂದ್ರ ಸರ್ಕಾರವನ್ನು, ಬಿ.ಜೆ.ಪಿ. ನಾಯಕರುಗಳನ್ನು ದೂರುವ ಒಂದಂಶದ ಕಾರ್ಯಕ್ರಮ ಇಟ್ಟುಕೊಂಡಿದ್ದರು.

Edited By

Ramesh

Reported By

Ramesh

Comments