ಮಂಡ್ಯ ರೈತರ ಮನಗೆದ್ದ ಮುಖ್ಯಮಂತ್ರಿ ಕುಮಾರಸ್ವಾಮಿ..!!!

ಆಗಸ್ಟ್ ನಲ್ಲಿ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ಕೊಯ್ಲುಗೆ ಬಂದಿದ್ದು ಅದನ್ನು ನೆನ್ನೆ ಸಂಜೆ 6 ಗಂಟೆಗೆ ಗದ್ದೆಗಿಳಿದು ಭತ್ತ ಕೊಯ್ಲಿಗೆ ಚಾಲನೆ ನೀಡಿದ ಕುಮಾರಸ್ವಾಮಿ, ಕೊಯ್ಲು ಮಾಡುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ರೈತರ ಮನಗೆದ್ದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ರೈತರ ಜೊತೆಗೂಡಿ ಭತ್ತದ ಕೊಯ್ಲು ಮಾಡಲು ಮುಂದಾಗಿರುವ ನಿರ್ಧಾರದಿಂದ ಈ ಭಾಗದ ರೈತರಲ್ಲಿ ಮತ್ತಷ್ಟು ಉತ್ಸಾಹ ಮೂಡಿದ್ದು, ಕೊಡಗಿನಲ್ಲಿ ಉತ್ತಮ ಮಳೆಯಿಂದ ನಾಡಿನ ರೈತರು ಕೃಷಿಯಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಭತ್ತ ಖರೀದಿ ಕೇಂದ್ರವನ್ನು ರಾಜ್ಯದಲ್ಲಿ ಪ್ರಾರಂಭಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ರೂ 1,850 ಭತ್ತಕ್ಕೆ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದ್ದು, ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಕೈಗೆ ಭತ್ತವನ್ನು ನೀಡಿ ನಷ್ಟ ಅನುಭವಿಸಬಾರದು ಎಂದು ರೈತರಿಗೆ ಎಚ್ ಡಿ ಕೆ ಮನವಿ ಮಾಡಿದರು. ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ರೈತರ ಸಾಲಮನ್ನಾವನ್ನು ಹಂತ ಹಂತವಾಗಿ ಮಾಡಲಾಗುತ್ತದೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
Comments