ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ 24 ನೇ ವರ್ಷದ ಲಕ್ಷದೀಪೋತ್ಸವ
ನಗರದ ಚೌಡೇಶ್ವರಿಗುಡಿ ಬೀದಿಯಲ್ಲಿರುವ ಶ್ರೀ ರಾಮಲಿಂಗ ಚಂದ್ರಚೌಡೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ 24 ನೇ ವರ್ಷದ ಲಕ್ಷದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ದೀಪೋತ್ಸವದ ಅಂಗವಾಗಿ ಎಲ್ಲಾ ದೇವರುಗಳಿಗೆ ವಿವಿಧ ಅಲಂಕಾರಗಳನ್ನು ಮಾಡಿ ವಿಷೇಶ ಪೂಜೆ ಏರ್ಪಡಿಸಲಾಗಿತ್ತು. ದೇವಸ್ಥಾನವನ್ನು ವಿಷೇಶವಾಗಿ ಅಲಂಕರಿಸಿ ರಾಮಲಿಂಗೇಶ್ವರಸ್ವಾಮಿಗೆ ಉಜ್ಜಯನಿ ಮಹಾಕಾಳೇಶ್ವರ ಅಲಂಕಾರ, ಬಸವಣ್ಣನಿಗೆ ಬಾದಾಮಿ ಅಲಂಕಾರ ಮಾಡಲಾಗಿತ್ತು. ಸಂಜೆ ಆರೂ ಮುವತ್ತಕ್ಕೆ ಮಂಡಲಿಯ ಪ್ರಭಾರಿ ಅಧ್ಯಕ್ಷ ದಿನೇಶ್ ಮತ್ತು ಕಾರ್ಯದರ್ಶಿ ಕೇಶವ ದೀಪ ಬೆಳಗುವುದರ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಟಿ.ವೆಂಕಟರಮಣಯ್ಯ, ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್, ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ ದೇವಸ್ಥಾನಕ್ಕೆ ಆಗಮಿಸಿದ್ದರು, ದೇವಾಂಗ ಮಂಡಲಿಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಚಿಕ್ಕಣ್ಣ, ಸಹಕಾರ್ಯದರ್ಶಿ ನಟರಾಜ್, ಸದಸ್ಯರಾದ ಶಿವರಾಂ, ಅಖಿಲೇಶ್, ರಾಘವೇಂದ್ರ, ನಟರಾಜ್, ಗೋಪಾಲ್, ಜನಾರ್ದನ್,ಗೋಪಿ, ಪ್ರಭಾಕರ್,ನಿರ್ಮಲ, ಶ್ರೀದೇವಿ, ವರಲಕ್ಷ್ಮಿ, ಶೀಲ ಹಾಜರಿದ್ದರು.
Comments