ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದ ಕೊಪ್ಪಳದ ರೈತ..! ಅಷ್ಟಕ್ಕೂ ಪತ್ರದಲ್ಲೆನಿತ್ತು..!!
ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೂ ಸಾಲ ಮನ್ನಾದ ವಿಷಯ ದಿನದಿಂದ ದಿನಕ್ಕೆ ಸಾಕಷ್ಟು ಕಗ್ಗಂಟಾಗುತ್ತಿದೆ.. ಬ್ಯಾಂಕ್ ನಿಂದ ಸಾಲ ಮರುಪಾವತಿಗೆ ಮೊಬೈಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಮನನೊಂದ ರೈತರೊಬ್ಬರು ಸಿಎಂ ಹೆಚ್.ಡಿ. ಕೆ ಗೆ ಪತ್ರ ಬರೆದಿದ್ದಾರೆ.
ಕೊಪ್ಪಳ ಜಿಲ್ಲೆಯ ರೈತ ಯಮನೂರಪ್ಪ ಮೇಟಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದು, ಸಾಲ ಮರುಪಾವತಿಸಿ ಎಂದು ಸಂದೇಶ ಬರುತ್ತಿದ್ದು, ಏನ್ ಮಾಡೋಣ ಹೇಳಿ, ಹಲವು ವರ್ಷಗಳಿಂದ ಬರಗಾಲವಿದೆ. ಈಗ ನನಗೆ ಸಾಲ ಮರುಪಾವತಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Comments