ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣೋತ್ಸವ
ಕಾರ್ತೀಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಬನ್ನಿಮಂಗಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣೋತ್ಸವ ಏರ್ಪಡಿಸಲಾಗಿತ್ತು, ಗಿರಿಜಾ ಕಲ್ಯಾಣೋತ್ಸವವನ್ನು ಮಂಡಿ ಬ್ಯಾಡರಹಳ್ಳಿ ಆಂಜಿನಪ್ಪ ಮತ್ತು ಕಾಳನಾಯಕನಹಳ್ಳೀ ಭೀಮೇಶ್ ಕುಟುಂಬದವರಿಂದ ನೆಡೆಸಿಕೊಡಲಾಯಿತು. ಕಾರ್ಯಕ್ರಮದ ಅಂಗವಾಗಿ ಆಂಜನೇಯಸ್ವಾಮಿ ಮತ್ತು ಗಣಪತಿಸ್ವಾಮಿಯವರಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು, ಅಧ್ಯಕ್ಷ ಬ್ಯಾಡರಹಳ್ಳಿ ಮುನಿಆಂಜಿನಪ್ಪ, ಕಾರ್ಯದರ್ಶಿ ಬೇಗಲಿ ವಿಜಯಕುಮಾರ್, ಬನ್ನಿಮಂಗಲ ಸುತ್ತಮುತ್ತಲ ಹಳ್ಳಿಯ ಭಕ್ತಾದಿಗಳು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು.
Comments