‘ಜೆಡಿಎಸ್’ನ ಈ ಅಭ್ಯರ್ಥಿಗೆ ಒಲಿಯಲಿದೆ ಬಿಬಿಎಂಪಿ ಉಪಮೇಯರ್ ಸ್ಥಾನ

ಇಂದು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ರಮಿಳಾ ಉಮಾಶಂಕರ್ ಅವರು ಅಕಾಲಿಕಾ ನಿಧನದ ಹಿನ್ನಲೆಯಲ್ಲಿ ರಾಮಮೂರ್ತಿ ನಗರ ವಾರ್ಡ್ ನಂಬರ್ 26 ರ ಬಿಜೆಪಿ ಸದಸ್ಯೆ ಪದ್ಮಾವತಿ ಕಲ್ಕೆರೆ ಶ್ರೀನಿವಾಸ್ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಜೆಡಿಎಸ್ ನಿಂದ ನಾಗಪುರ ವಾರ್ಡ್ ಸದಸ್ಯ ಭದ್ರೇಗೌಡ ಅಖಾಡಕ್ಕೆ ಇಳಿದಿದ್ದಾರೆ..
ಬಿಬಿಎಂಪಿಯ 12 ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಮತ್ತು ಉಪಮೇಯರ್ ಚುನಾವಣೆ ಇಂದು ನಡೆಯಲಿದ್ದು, ಜೆಡಿಎಸ್ ನಿಂದ ಉಪಮೇಯರ್ ಹುದ್ದೆಗೆ ಭದ್ರೇಗೌಡ ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.. ಉಪಮೇಯರ್ ಸ್ಥಾನಕ್ಕೂ ಅಂದೇ ಚುನಾವಣೆ ನಡೆಯಲಿದ್ದು, ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಭದ್ರೇಗೌಡ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
Comments