ಜೆಡಿಎಸ್ ನಾಯಕ ತೆಗೆದುಕೊಂಡ ಮಹತ್ವದ ನಿರ್ಧಾರ..!! ಏನ್ ಗೊತ್ತಾ..?
ಸ್ವಲ್ಪ ದಿನಗಳ ಹಿಂದಷ್ಟೆ ನಾಲೆಗೆ ಬಸ್ ಒಂದು ಬಿದ್ದು ಸಾಕಷ್ಟು ಮಂದಿ ಸಾವನ್ನಪ್ಪಿದ್ದರು.. ನಾಲೆಗಳಿಗೆ ಬಿದ್ದು ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನಾಲೆಗಳಿಗೆ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ .ಪುಟ್ಟರಾಜು ಸೋಮವಾರ ತಿಳಿಸಿದ್ದಾರೆ.
ಲೋಕಸರ ಗ್ರಾಮದಲ್ಲಿ ಬೈಕ್‌ನಿಂದ ನಾಲೆಗೆ ಬಿದ್ದು ಮೃತಪಟ್ಟಮೂವರ ಕುಟುಂಬ ವರ್ಗದವರಿಗೆ ನಗರದ ಜಿಲ್ಲಾಸ್ಪತ್ರೆಗೆ ಭೇಟಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ಕೆರೆ ಮತ್ತು ನಾಲಾ ರಸ್ತೆಗಳಿರುವ ಕಡೆ ತಡೆಗೋಡೆ ನಿರ್ಮಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ .ಪುಟ್ಟರಾಜು ತಿಳಿಸಿದರು. ಇದರಿಂದಾಗಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂಬ ಉದ್ದೇಶದಿಂದ ಈಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
Comments