ಶ್ರೀ ನಗರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಷೇಶ ಅಲಂಕಾರ, ಲಕ್ಷ ದೀಪೋತ್ಸವ







ನಗರದ ಮುಖ್ಯರಸ್ತೆಯಲ್ಲಿರುವ ಶ್ರೀ ನಗರೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಡೆಯ ಕಾರ್ತೀಕ ಸೋಮವಾರದ ಪ್ರಯುಕ್ತ ಎಲ್ಲಾ ದೇವರುಗಳಿಗೆ ವಿಷೇಶ ಅಲಂಕಾರ ಮಾಡಿ ದೇವಸ್ಥಾನವನ್ನು ವಿಷೇಶವಾಗಿ ಅಲಂಕರಿಸಲಾಗಿತ್ತು, ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಸಂಜೆ 6 ಆರು ಘಂಟೆಗೆ ಲಕ್ಷ ದೀಪೋತ್ಸವವನ್ನು ಶ್ರೀ ನಗರೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಡೆಪ್ಯೂಟಿ ತಹಸೀಲ್ದಾರರಾದಂತಹ ಮೇಘನ, ಮಮತ, ಶಿಲ್ಪ ಮತ್ತು ನಗರ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಸುಬ್ರಮಣಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ನಗರೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಬೇಕರಿ ಸತೀಶ್, ಕಾರ್ಯದರ್ಶಿ ಶ್ಯಾಮ, ಖಜಾಂಚಿ ರಾಜೇಶ ಮತ್ತು ಟ್ರಸ್ಟಿಗಳು ಭಾಗವಹಿಸಿದ್ದರು.
Comments