ಶ್ರೀ ಪ್ರಸನ್ನ ಚಂದ್ರಮೌಳೇಶ್ವರಸ್ವಾಮಿ[ಅರುಣಾಚಲೇಶ್ವರ] ಬ್ರಹ್ಮರಥೋತ್ಸವ







ದಿನಾಂಕ 3-12-2018 ಕಡೆಯ ಸೋಮವಾರದ ಪ್ರಯುಕ್ತ ದೊಡ್ಡಬಳ್ಳಾಪುರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಷೇಶ ಪೂಜೆಗಳನ್ನು ಏರ್ಪಡಿಸಲಾಗಿತ್ತು, ಊರಿನ ತೇರಿನ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಚಂದ್ರಮೌಳೇಶ್ವರಸ್ವಾಮಿ[ಅರುಣಾಚಲೇಶ್ವರ] ಯವರ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ಮಧ್ಯಾನ್ಹ 2 ಘಂಟೆಗೆ ನಡೆಯಿತು. [4-12-2018 ಮಂಗಳವಾರ ಹಗಲುಪರಿಷೆ ನಡೆಯಲಿದೆ] ನಗರದ ಮತ್ತು ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಗೆ ಹಣ್ಣು-ಧವನ ಅರ್ಪಿಸಿದರು. ನೂರಾರು ಭಕ್ತರು ಭಕ್ತಿಯಿಂದ ಬೃಹತ್ ರಥವನ್ನು ಎಳೆದರು. ರಥೋತ್ಸವದ ಅಂಗವಾಗಿ ಶ್ರೀ ನಂದಿ ಗಿರಿಪ್ರದಕ್ಷಿಣಾ ಸೇವಾಟ್ರಸ್ಟ್ ವತಿಯಿಂದ ಅರವಂಟಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಟ್ರಸ್ಟ್ ಅಧ್ಯಕ್ಷ ಕೆ.ಓ.ನಾಗರಾಜ್ , ಶ್ರೀನಿವಾಸ್, ವೇಣು, ಅಖಿಲೇಶ್. ಶ್ರೀನಾಥ್, ವಿಶ್ವನಾಥ್, ಗೋಪಿ. ಪ್ರಭಾಕರ್, ಕುಮಾರ್, ಉಮಾಕಾಂತ್, ಚಂದ್ರಶೇಕರ್ ಭಾಗವಹಿಸಿದ್ದರು.
Comments