250 ನೇ ಉಚಿತ ಕಣ್ಣಿನ ಪರೀಕ್ಷೆ, ಕಣ್ಣುಗಳ ಸಂಗ್ರಹಣೆಯ ಸಾಧಕರಿಗೆ ಸನ್ಮಾನ

04 Dec 2018 6:07 AM |
647 Report

ದೊಡ್ಡಬಳ್ಳಾಪುರದ ನಗರದಲ್ಲಿರುವ ಲಯನ್ಸ್ ಕ್ಲಬ್ ಮತ್ತು ದೊಡ್ಡಬಳ್ಳಾಪುರ ಲಯನ್ಸ್ ಚಾರಿಟೀಸ್ ಟ್ರಸ್ಟ್ ಇವರ ವತಿಯಿಂದ ಇಂದು ಲಯನ್ಸ್ ಭವನದಲ್ಲಿ 250 ನೇ ಉಚಿತ ಕಣ್ಣಿನ ಪರೀಕ್ಷೆ ಮತ್ತು ಐ.ಓ.ಎಲ್. ಅಳವಡಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುಷ್ಪಾಂಡಜ ಮಹರ್ಷಿ ಆಶ್ರಮ,ತಪಸಿಹಳ್ಳಿ. ಶ್ರೀ ಶ್ರೀ ಶ್ರೀ ದಿವ್ಯಜ್ಞಾನಂದಗಿರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಜಿಲ್ಲಾಧಿಕಾರಿ ಡಾ|| ಸಿ.ಸೋಮಶೇಕರ್ ನೆರವೇರಿಸಿದರು, ಮುಖ್ಯ ಅತಿಥಿಗಳಾಗಿ ಲಯನ್ ಕೆ. ಸತ್ಯನಾರಾಯಣ ರಾಜು, ಲಯನ್ ಕೆ.ಎಂ.ಹನುಮಂತರಾಯಪ್ಪ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಲಯನ್ ಕೆ.ವಿ.ಪ್ರಭುಸ್ವಾಮಿ ವಹಿಸಿದ್ದರು. ಬೆಳಿಗ್ಗೆ ಎಂಟು ಘಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಲಯನ್ಸ್ ಸದಸ್ಯರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಂದ ದೃಷ್ಠಿದಾನ ಮತ್ತು ನೇತ್ರದಾನ ಜಾಗೃತಿ ಜಾಥ ಎರ್ಪಡಿಸಲಾಗಿತ್ತು.

೧೯೯೭-೯೮ ನೇ ಸಾಲಿನಲ್ಲಿ ಪಿ.ಸಿ.ಲಕ್ಷ್ಮೀನಾರಾಯಣ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಐ್.ಓ.ಎಲ್. ಶಿಬಿರಗಳನ್ನು ನೆಡೆಸಲು ಪ್ರಾರಂಭಿಸಲಾಯಿತು, ದೃಷ್ಠಿದಾನ, ನೇತ್ರದಾನ ಮತ್ತು ಕಣ್ಣುಗಳ ಸಂಗ್ರಹಣೆಯಲ್ಲಿ ತೊಡಗಿರುವ ಸಾಧಕರಾದಂತಹ ಪಂಜಿನಿ ಪಿ.ಸಿ.ಲಕ್ಷ್ಮೀನಾರಾಯಣ್, ಪುಟ್ಟರುದ್ರಪ್ಪ, ಎಂ.ಬಿ.ಗುರುದೇವ್, ಡಾ.ಅಂಬಿಕ,ಡಾ.ಕಾಂತಿಮತಿ,ಡಾ.ಕೆ.ವಿ.ಹರೀಶ್, ಟಿ.ವಿ.ರವಿ, ನಾರಾಯಣಸ್ವಾಮಿ ಮತ್ತಿತರರಿಗೆ ಸನ್ಮಾನಿಸಲಾಯಿತು,ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ಖಜಾಂಚಿ ಹುಲಿಕಲ್ ನಟರಾಜ್ ಮತ್ತು ಕ್ಲಬ್ ಸದಸ್ಯರು ಭಾಗವಹಿಸಿದ್ದರು.

Edited By

Ramesh

Reported By

Ramesh

Comments