ಪ್ರಯಾಣಿಕರ ಸಾರಿಗೆ ಸಮಿತಿ ವತಿಯಿಂದ ರಾಜ್ಯೋತ್ಸವ ಆಚರಣೆ...
ದಿನಾಂಕ 2-12-2018 ಭಾನುವಾರ ಬೆಳಿಗ್ಗೆ 7 ಘಂಟೆಗೆ ನಗರದ ತಾಲ್ಲೂಕು ಕಛೇರಿ ರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಮುಂಭಾಗದಲ್ಲಿ ಪ್ರಯಾಣಿಕರ ಸಾರಿಗೆ ಸಮಿತಿ ವತಿಯಿಂದ ಮೂರನೇ ವರ್ಷದ ರಾಜ್ಯೋತ್ಸವ ಆಚರಣೆ ನೆಡೆಸಲಾಯಿತು, ಕೆ.ಎಸ್.ಆರ್.ಟಿ.ಸಿ. ಚಿಕ್ಕಬಳ್ಳಾಪುರ. ವಿಭಾಗೀಯ ನಿಯಂತ್ರಣಾಧಿಕಾರಿ ಸೂರ್ಯಕಾಂತ್, ಕೆ.ಎಸ್.ಆರ್.ಟಿ.ಸಿ. ದೊಡ್ಡಬಳ್ಳಾಪುರ ಘಟಕ ವ್ಯವಸ್ಥಾಪಕ ಆನಂದ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ.ಯ ವಿಭಾಗೀಯ ನಿಯಂತ್ರಣಾಧಿಕಾರಿ ಸೂರ್ಯಕಾಂತ್,ವಿಭಾಗೀಯ ವ್ಯವಸ್ಥಾಪಕ ಆನಂದ್, ಚಾರ್ಜ್ ಮೆನ್ ನಾರಾಯಣಸ್ವಾಮಿ, ವರ್ಕ್ ಷಾಪ್ ಸೂಪರ್ ವೈಸರ್ ರಾಜೇಶ್,ಸಂಚಾರಿ ನಿರೀಕ್ಷಕ ವೆಂಕಟೆಶ ರವರುಗಳನ್ನು ಸನ್ಮಾನಿಸಲಾಯಿತು. ಪರಿಸರ ಕ್ಷೇಮಾಭೃದ್ಧಿ ಸಂಘ ಅಧ್ಯಕ್ಷ ಮಂಜುನಾಥ್ ರೆಡ್ಡಿ, ರಾಜಶೇಕರ್, ಸುಚೇತನಾ ಸಂಸ್ಥೆಯ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ನವೀನ್, ಮತ್ತು ಶ್ರೀನಿಧಿ, ಬೆಂ.ಜಿಲ್ಲಾ ರೋಟ್ರಾಕ್ ಪ್ರತಿನಿಧಿ ಕಿರಣ್ ರಾಜ್ ಮತ್ತು ತಂಡ, ಪ್ರಯಾಣಿಕರ ಸಾರಿಗೆ ಸಮಿತಿಯ ಮಂಜುನಾಥ್, ಶಿವು, ವಿನೋದ್, ಚಂದ್ರಶೇಕರ್, ನಯನ, ರಘುನಂದನ್, ಗೋಪಾಲ್ ಮತ್ತಿತರರು ಹಾಜರಿದ್ದರು.
Comments