ಬಿಗ್ ಬ್ರೇಕಿಂಗ್: ಬಿಜೆಪಿಯಿಂದ ಮತ್ತೆ ಶುರುವಾಯ್ತು ಆಪರೇಷನ್ ಕಮಲ : ಸಿಎಂ ಕೈ ಸೇರಿದ ಆಡಿಯೋ..!? ಅಷ್ಟಕ್ಕೂ ಆಡಿಯೋದಲ್ಲಿ ಏನಿದೆ..?
ಈಗಾಗಲೇ ರಾಜ್ಯದಲ್ಲಿರುವ ದೋಸ್ತಿ ಸರಕಾರವನ್ನು ಉರುಳಿಸಿ, ಹೇಗಾದ್ರು ಮಾಡಿ ಮತ್ತೆ ರಾಜ್ಯದಲ್ಲಿ ಅಡಳಿತ ನಡೆಸ ಬೇಕು ಅಂತ ಬಿಜೆಪಿ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ ಎನ್ನುವ ಅನುಮಾನಗಳಿಗೆ ಮತ್ತಷ್ಟು ಪುರಾವೆಗಳು ಸಿಗುತ್ತಲಿವೆ. ಈ ನಡುವೆ ದುಬೈ ಮೂಲದ ಉದ್ಯಮಿಯೊಂದಿಗೆ ಶ್ರೀರಾಮುಲು ಆಪ್ತ ಸಹಾಯಕ ಮಾತನಾಡಿರುವ ಆಡಿಯೋವೊಂದು ಇದೀಗ ವೈರಲ್ ಆಗಿದೆ.
ಕಾಂಗ್ರೆಸ್‍ನ 25ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿ ಮುಖಂಡರಾದ ಆರ್.ಅಶೋಕ್, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಪಿ.ಯೋಗೇಶ್ವರ್, ಜನಾರ್ಧನ್‍ರೆಡ್ಡಿ, ಶ್ರೀರಾಮುಲು ಹಾಗೂ ಇನ್ನಿತರ ಉದ್ಯಮಿಗಳು ಸೇರಿದಂತೆ ಹಲವರು ಸಂಪರ್ಕಿಸಿದ್ದಾರೆ. ಇದರ ಭಾಗವಾಗಿ ಶ್ರೀರಾಮುಲು ಅವರ ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿಯೊಬ್ಬರಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಆಡಿಯೋವೊಂದು ಬಹಿರಂಗವಾಗಿದ್ದು, ಕೇರಳ ಶೈಲಿಯಲ್ಲಿ ಆ ಉದ್ಯಮಿಯು ಮಾತನಾಡಿರುವುದನ್ನು ಆಡಿಯೋದಲ್ಲಿ ಬಹಿರಂಗವಾಗಿದೆ.
Comments