ಮಣ್ಣಲ್ಲಿ ಮಣ್ಣಾದರೂ ಜೆಡಿಎಸ್ ಪಕ್ಷ ಬಿಡಲ್ಲ ಎಂದ ನಾಯಕ ಯಾರ್ ಗೊತ್ತಾ..?
ನಾನು ಇದ್ದರೂ ಜೆಡಿಎಸ್ ನಲ್ಲಿ ಸತ್ತರೂ ಜೆಡಿಎಸ್ ನಲ್ಲಿ. ಸತ್ತರೂ ಕೂಡ ನಾನು ಬಿಜೆಪಿ ಹೋಗುವುದಿಲ್ಲ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ತಿಳಿಸಿದರು..ಜೆಡಿಎಸ್ ಶಾಸಕ ಡಿಸಿ ಗೌರಿ ಶಂಕರ್ ಅವರು ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿ ಆ ವಿಷಯಕ್ಕೆ ತೆರೆ ಎಳೆದಿದ್ದಾರೆ.
ತುಮಕೂರು ಜಿಲ್ಲೆಯ ಬೆಳ್ಳಾವಿ ಗ್ರಾಮದಲ್ಲಿ ಮಾತನಾಡಿದ ಅವರು ' ಸುಖಾ ಸುಮ್ಮನೆ ನನ್ನ ವಿರುದ್ಧ ಷಡ್ಯಂತ್ರ ಎಣಿಯಲಾಗುತ್ತಿದೆ. ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಿಂಗಾಪೂರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರ ಜೊತೆ ಮಾತನಾಡಲು ಮುಂಬೈ ತೆರಳಿದ್ದಾರೆ ಎಂದು ಹೇಳಿದ್ದಾರೆ. ನಾನು ಬಿಜೆಪಿ ಸೇರುವ ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Comments