ಆದಿ, ಮಧ್ಯ, ಅಂತ್ಯ ರಂಗಗಳ ತ್ರಿರಂಗ ದರ್ಶನ

01 Dec 2018 8:12 AM |
4997 Report

ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿ ರಂಗನಾಥನ ಈ ತ್ರಿರಂಗ ಕ್ಷೇತ್ರಗಳಾದ ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ. ಆದಿ ರಂಗ, ಶ್ರೀರಂಗಪಟ್ಟಣ, ಕರ್ನಾಟಕ. ಮೈಸೂರು ನಗರಕ್ಕೆ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ.

ಎರಡನೆಯ ಮದ್ಯ ರಂಗ, ಶಿವನಸಮುದ್ರ, ಕರ್ನಾಟಕ. ತ್ರಿರಂಗ ಕ್ಷೇತ್ರಗಳ ಎರಡನೇಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ.  ಶ್ರೀರಂಗಪಟ್ಟಣದಿಂದ ಮಳವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿದೆ, ಸಾಂಕೇತಿಕವಾಗಿ ಇದು ವಿಷ್ಣುವಿನ ಯೌವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ. ಕೊನೆಯ ಮೂರನೆ ಅಂತ್ಯ ರಂಗ, ಶ್ರೀರಂಗಂ, ತಮಿಳುನಾಡು. ತ್ರಿರಂಗಗಳ ಪೈಕಿ ಅಂತ್ಯ ರಂಗವು ತಮಿಳುನಾಡಿನ ಶ್ರೀರಂಗಂನಲ್ಲಿದೆ.  ಈ ದೇವಾಲಯವು ತ್ರಿರಂಗಗಳ ಪೈಕಿ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿ ಒಂದಾಗಿದೆ.  [ಧನುರ್ಮಾಸದ ಸಮಯದಲ್ಲಿ ದೇವಾಲಯ ಬೆಳಿಗ್ಗೆ 5ಗಂಟೆಗೆ ದರ್ಶನದ ವ್ಯವಸ್ಥೆಯ ಕಾರಣ ಒಂದೇ ದಿನದಲ್ಲಿ ಮೂರು ರಂಗನಾಥ ಸ್ವಾಮಿ ದರ್ಶನ ಪಡೆಯಬಹುದು.]

ಧನುರ್ಮಾಸ ಆರಂಭ (ಧನುರ್ ಸಂಕ್ರಮಣ) 16-12-2018 ಮಕರಸಂಕ್ರಾಂತಿಯವರೆಗೆ ಮೂರು ರಂಗ ದರ್ಶನಕ್ಕೆ ಪ್ರಶಸ್ಥ ಸಮಯ, ಆದಿ ರಂಗನಾಥ, ಮಧ್ಯ ರಂಗನಾಥ ಅಂತ್ಯ ರಂಗನಾಥ ತ್ರಿರಂಗ ದರ್ಶನಂ -ಒಂದೇ ದಿನದಲ್ಲಿ ಮೂರು ಕಡೆ ಬೆಳಿಗ್ಗೆ ಯಿಂದ ಸಂಜೆ ಸೂರ್ಯಾಸ್ತದ ಒಳಗೆ.. ಎರಡು ದಾರಿಯಲ್ಲಿ ದರ್ಶನ ಪಡೆಯಬಹುದು.

ಒಂದನೆಯ ದಾರಿ.  

ಆದಿರಂಗ ಶ್ರೀರಂಗಪಟ್ಟಣದಿಂದ-ಬನ್ನೂರು-ಮಳವಳ್ಳಿ-ಶಿವನಸಮುದ್ರ-ಮಧ್ಯರಂಗ-ಕೊಳ್ಳೇಗಾಲ ಯಳಂದೂರು-ಚಾಮರಾಜನಗರ-ಬೆನಕನಹಳ್ಳಿ-ಡಿಂಬಮ-ಬನ್ನಾರಿ-ಸತ್ಯಮಂಗಲ ಗೋಪಿಚೆಟ್ಟಿಪಾಳ್ಯ-ಈರೋಡ್- ನಾಮಕ್ಕಲ್-ತೂಟ್ಟಯಮ್-ಮುಸಿರಿ-ಗುಣಶೀಲಮ್-ತಿರುಚ್ಚಿ ಶ್ರೀರಂಗಂ

ಎರಡನೆಯ ದಾರಿ.

ಆದಿರಂಗ ಶ್ರೀರಂಗಪಟ್ಟಣದಿಂದ ಬನ್ನೂರು-ಮಳವಳ್ಳಿ-ಶಿವನಸಮುದ್ರ-ಮಧ್ಯರಂಗ-ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಪಾಲರ್-ಮೆಟ್ಟೂರು-ಸೇಲಂ-ನಾಮಕ್ಕಲ್-ತೂಟ್ಟಯಮ್-ಮುಸಿರಿ- ಗುಣಶೀಲಮ್-ತಿರುಚ್ಚಿ ಶ್ರೀರಂಗಂ-ಅಂತ್ಯರಂಗ.

ಲೇಖನ....ವಾಟ್ಸಪ್ ಕೃಪೆ

Edited By

Ramesh

Reported By

Ramesh

Comments