ಸಿಎಂ ಆಸೆ ಹೊತ್ತಿದ್ದ ಬಿಎಸ್ವೈಗೆ ಬಿಗ್ ಶಾಕ್..!!

ಡಿಸೆಂಬರ್ ನಲ್ಲಿ ಸಿ ಎಂ ಆಗಲು ಕನಸು ಕಾಣುತ್ತಿದ್ದ ಬಿ ಎಸ್ ಯಡ್ಯೂರಪ್ಪ ಗೆ RSS ನ ವರಿಷ್ಠರು ಈಗ ತಣ್ಣೀರು ಎರಚಿದರೆ.
ಬಿ ಎಸ್ ಯಡ್ಯೂರಪ್ಪನವರನ್ನ RSS ವರಿಷ್ಠರು ಕರೆದು ನೀವು ಸಿ ಎಂ ಆಗಲು ಮಾಡಿಕೊಂಡಿರುವ ಎಲ್ಲ ಪ್ಲಾನ್ ಗಳನ್ನೂ ತಕ್ಷಣದಿಂದ ಬಿಟ್ಟು ಬಿಡಿ ಎಂದು ತಾಕೀತು ಮಾಡಲಾಗಿದೆ. ಯಡ್ಯೂರಪ್ಪನವರು ಡಿಸಂಬರ್ 10 ರಿಂದ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸುಮಾರು 10 ಜನ ಶಾಸಕರನಗೈರು ಹಾಜರಾಗುವಂತೆ ಮಾಡಿ ಆ ಸಮಯದಲ್ಲಿ ಸರಕಾರವನ್ನ ಉರಿಳಿಸಲು ಪ್ಲಾನ್ ಮಾಡಿಕೊಂಡಿದ್ದರು. ಇದನ್ನ ತಿಳಿದ RSS ವರಿಷ್ಠರು ಕರೆದು 2019 ಲೋಕ ಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ನೀವೇನಾದರೂ ಮೈತ್ರಿ ಸರಕಾರವನ್ನು ಬೀಳಿಸಿದರೆ ಅದು ಬಿಜೆಪಿ ಮೇಲೆ ಪರಿಣಾಮ ಬೀಳಲಿದೆ ಅದರ ಲಾಭ ಜೆಡಿಎಸ್- ಕಾಂಗ್ರೆಸ್ ಪಡೆದುಕೊಳ್ಳುತ್ತದೆ, ನಿಮ್ಮ ವಯಕ್ತಿಕ ಆಸೆಗೆ ಪಕ್ಷವನ್ನ ಬಲಿಕೊಡಬೇಡಿ ಸರ್ಕಾರವನ್ನು ಬೀಳಿಸಲು ಪ್ಲಾನ್ ಮಾಡಿಕೊಂಡಿದ್ದರೆ ತಕ್ಷಣವೇ ಕೈ ಬಿಡಿ ಎಂದು RSS ನಾಯಕರು ಖಡಕ್ ವಾರ್ನಿಂಗ್ ಕೊಟ್ಟಿದಾರೆ.
Comments