ಎಚ್ ಡಿ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ ಜಮೀರ್ ಅಹ್ಮದ್..!!!

ರಾಜ್ಯದ ಅಭಿರುದ್ದಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಾರೆ ಎನ್ನುವ ಆರೋಪಕ್ಕೆ ಇದೀಗ ಸಚಿವ ಜಮೀರ್ ಅಹ್ಮದ್ ಸಿಎಂ ಪರ ಬ್ಯಾಟ್ ಬೀಸಿದರೆ.
ಮುಖ್ಯ ಮಂತ್ರಿಗಳು ಹಳೆ ಮೈಸೂರು ಭಾಗಕ್ಕೆ ಹೆಚ್ಚು ಅನುದಾನ ನೀಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್ ಎಚ್ ಡಿ ಕುಮಾರಸ್ವಾಮಿ ಯವರು ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂದು ಹೆಚ್ ಡಿ ಕೆ ಎಲ್ಲಿಯಾದರು ಹೇಳಿಕೊಂಡಿದ್ದಾರಾ.? ಅನುದಾನ ಕೊಡುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಒತ್ತಡ ಹಾಕಿ ಅನುದಾನ ತೆಗೆದುಕೊಳ್ಳುವುದು ಅವರ ಜವಾಬ್ದಾರಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು ರೇವಣ್ಣ ನ ಬಗ್ಗೆ ಮಾತನಾಡಿ ಅವರು ಸ್ಟ್ರಾಂಗ್ ವ್ಯಕ್ತಿತ್ವದವರಾಗಿದ್ದು ,ಅವರಿಗೆ ಬೇಕಾದ ಅನುದಾನವನ್ನು ಅವರು ಪಡಿದುಕೊಳ್ಳುತ್ತಾರೆ. ಅಗತ್ಯವಿದ್ದವರು ಅನುದಾನವನ್ನು ಕೇಳಿ ಪಡೆಯಬೇಕೆಂದು ಸಿ ಎಂ ಪರ ಮಾತನಾಡಿದರೆ. ಅಲ್ಲದೇ ನನಗೂ ಹಾವೇರಿ ಜಿಲ್ಲೆಗೆ ಅನುದಾನ ಬೇಕು. ವಕ್ಫ್ ಆಸ್ತಿಗೆ ಕಾಂಪೌಂಡ್ ಹಾಕಲು 500 ಕೋಟಿ ಅಗತ್ಯವಿದ್ದು, ಶೀಘ್ರ 100 ಕೋಟಿ ರಿಲೀಸ್ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
Comments