ನಾಗರಕೆರೆ ಏರಿ ಮೆಟ್ಟಿಲುಗಳ ಸ್ವಚ್ಛತೆಗೆ ಮುಂದಾದ ಮೋದಿ ಬಾಯ್ಸ್





ಮೋದಿ ಬಾಯ್ಸ್ ವತಿಯಿಂದ ಇಂದು ನಾಗರಕೆರೆ ಏರಿ ಮೆಟ್ಟಿಲುಗಳ ಮೇಲೆ ವ್ಯರ್ಥವಾಗಿ ಬೆಳೆದಿದ್ದ ಗಿಡಗಳನ್ನು ಹಾಗೂ ಕಸವನ್ನು ತೆಗೆದು ಶುಚಿಗೊಳಿಸುವ ನಿಟ್ಟಿನಲ್ಲಿ ತಂಡದ ಸದಸ್ಯರು ಕಾರ್ಯೋನ್ಮುಕರಾದರು, ಸಾರ್ವಜನಿಕರ ಬಳಕೆ ಇಲ್ಲದೆ ಮೆಟ್ಟಿಲುಗಳ ಮೇಲೆ ಗಿಡಗಳು ಬೆಳೆದಿದು ಕಸ ತುಂಬಿಕೊಂಡಿದ್ದ ಜಾಗವನ್ನು ನಗರದ ವನ್ಹಿಗರ ಪೇಟೆಯಲಿರುವ ಮೋದಿ ಬಾಯ್ಸ್ ಸದಸ್ಯರು ಅಧ್ಯಕ್ಷ ನರೇಂದ್ರ ನೇತೃತ್ವದಲ್ಲಿ ಸ್ವಚ್ಹಮಾಡುವ ಸಂಕಲ್ಪದೊಂದಿಗೆ ಖಜಾಂಚಿ ಗಂಗಾಧರ, ಭಕ್ತ, ಗುರು, ವಿ. ನರಸಿಂಹ ಮೂರ್ತಿ, ರಾಮಮೂರ್ತಿ, ಯವರೊಂದಿಗೆ ಅವಿಜ್ಞಾ ಕಬಡ್ಡಿ ತಂಡದ ಸದಸ್ಯರು ಹಾಗೂ ಓಬದೇವನ ಹಳ್ಳಿಯ ಯುವಕರು ಭಾಗವಹಿಸಿದ್ದರು. ಅಧ್ಯಕ್ಷ ನರೇಂದ್ರ ಮಾತನಾಡಿ ನಾಗರಕೆರೆಯ ಮೆಟ್ಟಿಲುಗಳನ್ನು ಹಂತ ಹಂತವಾಗಿ ಸ್ವಚ್ಛ ಮಾಡಲು ನಿರ್ಧರಿಸಲಾಗಿದ್ದು, ಮೋದಿ ಬಾಯ್ಸ್ ಮತ್ತು ತಾಲ್ಲೂಕಿನಲ್ಲಿರುವ ಎಲ್ಲಾ ಕಬಡ್ಡಿ ತಂಡಗಳ ಸದಸ್ಯರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
Comments