13 ನೇ ವರ್ಷದ ಶ್ರೀ ಗಿರಿಜಾ ರಾಮಲಿಂಗೇಶ್ವರಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ
ಇಂದು ನಗರದ ಚೌಡೇಶ್ವರಿ ಗುಡಿ ಬೀದಿಯಲ್ಲಿರುವ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ 13 ನೇ ವರ್ಷದ ಶ್ರೀ ಗಿರಿಜಾ ರಾಮಲಿಂಗೇಶ್ವರಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ ನೆರವೇರಿಸಲಾಯಿತು, ಬೆಳಿಗ್ಗೆ ಐದೂ ಮೂವತ್ತಕ್ಕೆ ಶ್ರೀ ಚೌಡೇಶ್ವರಿ ಅಮ್ಮನವರು, ಶ್ರೀ ರಾಮಲಿಂಗೇಶ್ವರಸ್ವಾಮಿ ಹಾಗೂ ಪಾರ್ವತಾದೇವಿಯವರಿಗೆ ಪಂಚಾಂಮೃತಾಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬೆಳಿಗ್ಗೆ 7-30 ಕ್ಕೆ ಸ್ವಸ್ತಿ ವಾಚನ, ದೇವನಾಂದಿ, ವಾಗ್ ನಿಶ್ಚಯ, ವರಪೂಜೆ, ಕನ್ಯಾದಾನ, ಮಾಂಗಲ್ಯ ಧಾರಣೆಯೊಂದಿಗೆ ಕಲ್ಯಾಣ ಮಹೋತ್ಸವ ನೆರವೇರಿತು,
ಮಧ್ಯಾನ್ಹ 1 ಘಂಟೆಗೆ ಬ್ರಹ್ಮರಥೋತ್ಸವ ಕಾರ್ಯಕ್ರಮ ನೆರವೇರಿತು, ಸಿನೆಮಾ ರಸ್ತೆಯಲ್ಲಿರುವ ಹುಂಗಿ ಕುಟುಂಬದವರಿಂದ ಮಜ್ಜಿಗೆ ಮತ್ತು ಪಾನಕದ ಸೇವೆ, ಗೆಳೆಯರ ಬಳಗ ತಂಡದಿಂದ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಸೇವೆಯ ಅರವಂಟಿಗೆ ಕಾರ್ಯಕ್ರಮ ಏರ್ಪಡಿಸಿದ್ದರು, ಕುಲಭಾಂದವರು ಹಾಗೂ ಭಕ್ತಾದಿಗಳು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಸಂಜೆ ಆರು 3ಘಂತ್ಗೆ ಉಯ್ಯಾಲೋತ್ಸವ ಮತ್ತು 9-3೦ಕ್ಕೆ ಶಯನೋತ್ಸವ ಸೇವೆ ಇರುತ್ತದೆ. ಈ ಎಲ್ಲ ಕಾರ್ಯಕ್ರಮಗಳನ್ನು ದೇವಾಂಗ ಮಂಡಲಿ ವತಿಯಿಂದ ಏರ್ಪಡಿಸಲಾಗಿತ್ತು.
Comments