ನಮ್ಮ ಕರ್ನಾಟಕದ ಜೀವ ನದಿಗಳ ಅಳಿವು-ಉಳಿವು ಸಮಗ್ರ ಚಿತ್ರಣ ಕುರಿತ .....ಪ್ರಬಂಧ ಸ್ಪರ್ಧೆ

23 Nov 2018 8:09 AM |
802 Report

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಡಾ|| ವೆಂಕಟರೆಡ್ಡಿ ನೆನಪಿಗಾಗಿ ಶ್ರೀ ಗಂಗಾ ಭಗತ್ ಸಿಂಗ್-ಚಂದ್ರಶೇಖರ್ ಆಜಾದ್ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್,ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಮ್ಮ ಕರ್ನಾಟಕದ ಜೀವ ನದಿಗಳ ಅಳಿವು-ಉಳಿವು ಸಮಗ್ರ ಚಿತ್ರಣ ಕುರಿತಂತೆ .....ಪ್ರಬಂಧ ಸ್ಪರ್ಧೆಯನ್ನು ನಗರದ ಜನತೆಗೆ ಏರ್ಪಡಿಸಲಾಗಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ, ಪ್ರಬಂಧ ಸ್ಪರ್ಧೆಯು ಪ್ರೌಢಶಾಲೆ, ಕಾಲೇಜು ಮತ್ತು ಸಾಮಾನ್ಯ ಜನತೆ ಮೂರು ವರ್ಗದಲ್ಲಿ ಇರುತ್ತದೆ, ಎಲ್ಲಾ ಸ್ಪರ್ಧಿಗಳ ಅತ್ಯುತ್ತಮವಾದ ಒಂದು ಪ್ರಬಂಧಕ್ಕೆ ಮೊದಲ ಬಹುಮಾನ ಇರುತ್ತದೆ. ಎರಡನೇ, ಮೂರನೇ ಮತ್ತು ಸಮಾಧಾನಕರ ಬಹುಮಾನಗಳು ಮೂರೂ ವರ್ಗಗಳಲ್ಲಿ ಪ್ರತ್ಯೇಕವಾಗಿರುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಮೊದಲ ನೂರು ಸ್ಪರ್ಧಿಗಳಿಗೆ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕ ಉಡುಗೊರೆಯಾಗಿ ನೀಡಲಾಗುತ್ತದೆ, ಮೊದಲನೇ ಬಹುಮಾನವಾಗಿ ಬಿನ್ನವತ್ತಳೆ ಮತ್ತು ಮಂಗಳೂರಿಗೆ ಇಬ್ಬರಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕಳುಹಿಸಲಾಗುವುದು, ಎರಡು ಮತ್ತು ಮೂರನೇ ಬಹುಮಾನವಾಗಿ ಪೂರ್ಣಚಂದ್ರ ತೇಜಸ್ವಿಯವರ ಹತ್ತು ಪುಸ್ತಕಗಳು ಮತ್ತು ಶೈಕ್ಷಣಿಕ ಪ್ರವಾಸ ಇರುತ್ತದೆ.  ಪ್ರಬಂಧ ಬರಹಗಳನ್ನು ಡಾ||ರಮೇಶ ಗೌಡ,ಶ್ರೀ ಗಂಗಾ ಭಗತ್ ಸಿಂಗ್-ಚಂದ್ರಶೇಖರ್ ಆಜಾದ್ ಆಸ್ಪತ್ರೆ, ಕೆ.ವಿ.ಪ್ರಭುಸ್ವಾಮಿ, ಅಧ್ಯಕ್ಷರು ಲಯನ್ಸ್ ಕ್ಲಬ್, ಹುಲಿಕಲ್ ನಟರಾಜ್ ಎಂ.ಜೆ.ಎಫ್. ವಲಯ ಅಧ್ಯಕ್ಷರು, ಎಂ.ಆರ್.ಶ್ರೀನಿವಾಸ್ ಕಾರ್ಯದರ್ಶಿ, ಲಯನ್ಸ್ ಕ್ಲಬ್ ಇವರಿಗೆ ದಿನಾಂಕ ೩೧-೧೨-೨೦೧೮ ಸೋಮವಾರದ ಒಳಗೆ ಸಲ್ಲಿಸಬಹುದು. ಪ್ರಶಸ್ತಿ ಪ್ರಧಾನ ಸ್ಥಳ ಮತ್ತು ದಿನಾಂಕಗಳನ್ನು ಮುಂದೆ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:- 9886401828, 9448271715

Edited By

Ramesh

Reported By

Ramesh

Comments