ನಿಸರ್ಗ ಯೋಗ ಕೇಂದ್ರದ ಜಾಹ್ನವಿ, ವರ್ಷಿಣಿ, ವಿನಯ್ ಕುಮಾರ್ಗೆ ರಾಷ್ಟ್ರ ಮಟ್ಟದಲ್ಲಿ ಆರನೇ ಸ್ಥಾನ




2018 ನವೆಂಬರ್ 18 ರಿಂದ 22 ರವರೆಗೆ ಪಂಜಾಬಿನ ಪಾಟಿಯಾಲದಲ್ಲಿ ನಡೆದ 43 ನೇ ರಾಷ್ಟ್ರೀಯ ಯೋಗ ಛಾಂಪಿಯನ್ ಷಿಪ್ ನಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳಾದ ಎಂ.ಆರ್.ಜಾಹ್ನವಿ, ಪಿ.ವಿ.ವರ್ಷಿಣಿ ಮತ್ತು ಕೆ.ವಿನಯ್ ಕುಮಾರ್ ರಾಷ್ಟ್ರ ಮಟ್ಟದಲ್ಲಿ ಪದಕ ಮತ್ತು ಪ್ರಶಸ್ತಿಪತ್ರ ಪಡೆದಿದ್ದಾರೆ. 8 ರಿಂದ 11 ವರ್ಷದ ಬಾಲಕಿಯರ ವಿಭಾಗದಲ್ಲಿ ಎಂ.ಎಸ್.ವಿ ಪಬ್ಲಿಕ್ ಸ್ಕೂಲ್ ನ ಎಂ.ಆರ್.ಜಾಹ್ನವಿ ಆರನೇ ಸ್ಥಾನ,11 ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ದೇವಲ ಮಹರ್ಷಿ ಸ್ಕೂಲ್ ವಿದ್ಯಾರ್ಥಿ ಕೆ.ವಿನಯ್ ಕುಮಾರ್ ಆರನೇ ಸ್ಥಾನ ಮತ್ತು 11 ರಿಂದ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಪ್ರೌಢಶಾಲೆಯ ಪಿ.ವಿ.ವರ್ಷಿಣಿ ಆರನೇ ಸ್ಥಾನದೊಂದಿಗೆ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದಿದ್ದಾರೆ.
ಪದಕ ಮತ್ತು ಪ್ರಶಸ್ತಿ ಪತ್ರ ಪಡೆದ ಮಕ್ಕಳಿಗೆ ಯೋಗ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಅಶೋಕ್ ಕುಮಾರ್ ಅಗರ್ನಾಲ್, ಪಂಜಾಬ್ ಯೋಗ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಗಿಲ್, ನಿಸರ್ಗ ಯೋಗ ಕೇಂದ್ರ ಅಧ್ಯಕ್ಷ ಹೆಚ್.ಸಿ.ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಶ್ಯಾಮಸುಂದರ್ ಮತ್ತು ಯೋಗ ಕೇಂದ್ರದ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
Comments