ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ...೨೦೧೮





ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಜಾಗೃತ ಪರಿಷತ್ತು (ರಿ) ಇವರ ಸಹಯೋಗದಲ್ಲಿ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ ಸಮಾಗಮ -೨೦೧೮ ರ ಸಪ್ತಾಹ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭ ವಿಧ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ದಿ. ೨೦/ ೧೧/೨೦೧೮ ನೆ ಮಂಗಳವಾರ ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಹಾಗೂ ನಗರಸಭೆ ಅಧ್ಯಕ್ಷ ತ. ನ. ಪ್ರಭುದೇವ್ ಉಧ್ಘಾಟಿಸಿದರು. ಪ್ರಾಂಶುಪಾಲರಾದ ಟಿ.ಕೆ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಜಾಪ ಅಧ್ಯಕ್ಷ ಡಿ.ವಿ. ಅಶ್ವತ್ಥಪ್ಪ, ಮಾಜಿ ಅಧ್ಯಕ್ಷ ಲಾಯರ್ ಕೃಷ್ಣಮೂರ್ತಿ, ತಾ ಕಸಾಪ ಅಧ್ಯಕ್ಷೆ ಪ್ರಮೀಳಮಹಾದೇವ್, ಕಾರ್ಯಾಧ್ಯಕ್ಷ ತರಿದಾಳ್ ಶ್ರೀನಿವಾಸ್, ಸಹಕಾರ್ಯದರ್ಶಿ ನಾಗಲಕ್ಷ್ಮೀ ಅವರೊಂದಿಗೆ ಎಸ್. ಡಿ. ಯು. ಐ. ಎಂ. ಪ್ರಾಂಶುಪಾಲ ಕೆ. ಆರ್. ರವಿಕಿರಣ್ ಭಾಷೆ, ಭಾವನೆ, ಭವಿಷ್ಯ ವಿಷಯದ ಬಗ್ಗೆ ವಿಷಯವನ್ನು ಮಂಡಿಸಿದರು. ನ.ಮಹಾದೇವ್, ಎನ್.ಸಿ.ಲಕ್ಷ್ಮೀ, ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು.
Comments