ರೆಬೆಲ್ ನಾಯಕರಿಗೆ ಆತಂಕ ತಂದ ಗುರು-ಶಿಷ್ಯರ ಸಮಾಗಮ

ಜೆಡಿಎಸ್ ನಿಂದ ಬಂಡಾಯವೆದಿದ್ದ ಚಲುವರಾಯಸ್ವಾಮಿ ಮತ್ತು ಬಂಡೆಸಿದ್ದೇಗೌಡರಿಗೆ ಗುರು-ಶಿಷ್ಯರ ಸಮಾಗಮದಿಂದ ಈಗ ಆತಂಕ ಶುರುವಾಗಿದೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ನವರ ಇತ್ತಿಚಿಗಿನ ಭೇಟಿ ಹೆಚ್ಚಿಗಿರುವುದರಿಂದ ಚಲುವರಾಯಸ್ವಾಮಿ ಮತ್ತು ಬಂಡೆಸಿದ್ದೇಗೌಡರಿಗೆ ಭವಿಷ್ಯಕ್ಕೆ ಕುತ್ತು ತರುವ ಆತಂಕ ಹೆಚ್ಚಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾತು ಕೇಳಿ ಮೂಲೆ ಗುಂಪು ಮಾಡುವ ಭೀತಿಯಲ್ಲಿದ್ದಾರೆ. ಇತ್ತಿಚೆಗೆ ಪಕ್ಷಾಸೂಚನೆ ಕೊಟ್ಟಿದ್ದರು ಕಾಂಗ್ರೆಸ್ ನ ಕೆಲ ನಾಯಕವು ಜೆಡಿಎಸ್ ಗೆ ಸಹಾಯ ಮಾಡಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನ ಮುಖಂಡರು ಅಪಾದನೆಮಾಡಿದ್ದರು. ದೇವೇಗೌಡರು ಸಿದ್ದರಾಮಯ್ಯ ನವರೊಂದಿಗೆ ಮಂಡ್ಯದ ರೆಬಲ್ ಮುಖಂಡರೊಂದಿಗೆ ಪಕ್ಷ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದೇ.
Comments