ಅಪ್ಪನ ಬೆನ್ನಿಗೆನಿಂತ ಮಗ ನಿಖಿಲ್ ಕುಮಾರಸ್ವಾಮಿ

ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯ ಬಗ್ಗೆ ಸಿಎಂ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ತಂದೆಯವರು ಹಾಗೂ ನಮ್ಮ ಕುಟುಂಬದವರೇ ಆಗಲಿ ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತಾ ಬಂದಿದ್ದಾರೆ. ಮುಂದೆನೂ ಕೊಡುತ್ತಾನೆ ಇರುತ್ತೀವಿ. ದಯವಿಟ್ಟು ಇದನ್ನು ಬೇರೆ ಬೇರೆ ರೀತಿ ವಿಶ್ಲೇಷಣೆ ಮಾಡಬೇಡಿ, ರೈತರು ಮುಗ್ಧರು.ಅವರು ಗೂಂಡಾ ವರ್ತನೆ ಮಾಡಲ್ಲ. ಸುವರ್ಣ ಸೌಧದಲ್ಲಿ ಗಲಾಟೆ ಮಾಡಿದ್ದೂ ಗುಂಡಾವರ್ತನೆ ಅಲ್ವಾ..? ನಮಗೂ ಗುಪ್ತಚರ ಇಲಾಖೆ ವರದಿ ಸಿಗುತ್ತೆ, ಪ್ರತಿಭಟನೆ ಯಾರ ಕೆಲಸ ಅನ್ನೋದು ನಮಗೂ ಅರಿವಿಗಿದೆ. ಎಲ್ಲಿ ಮಲಗಿದ್ರಿ ಅನ್ನೋ ತಂದೆ ಮಾತನ್ನ ಯಾರು ಅಪಾರ್ಥ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
Comments