ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ ಮಾಜಿ ಸಚಿವೆ ಮೋಟಮ್ಮ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಮಾಜಿ ಸಚಿವೆ ಮೋಟಮ್ಮ ಬ್ಯಾಟಿಂಗ್ ಮಾಡಿದ್ದಾರೆ. ರೈತ ಮಹಿಳೆ ವಿಚಾರವಾಗಿ ಸಿಎಂ ನೀಡಿರುವ ಪ್ರತಿಕ್ರಿಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆಯ ತೀವ್ರತೆ ಹೆಚ್ಚಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ರೀತಿ ಮಾತನಾಡಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ ಎಂದು ನುಡಿದರು.
ಸಂದರ್ಭಕ್ಕೆ ಅನುಸಾರವಾಗಿ ಕೆಲ ಬಾರಿ ಪ್ರತಿಕ್ರಿಯೆಗಳು ಬರುತ್ತೇವೆಯೇ ವಿನಾ ಅದನ್ನು ವೈಯಕ್ತಿಕ ಅಭಿಪ್ರಾಯ ಅಥವಾ ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುವುದು ಸಮಂಜಸವಲ್ಲ. ನಾನು ಸಿಎಂ ಹೆಚ್ಡಿಕೆ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ನಮ್ಮನ್ನು ಕೂಡ ಅಕ್ಕ ಹೋಗಿ ಬನ್ನಿ ಎಂದು ಮಾತನಾಡಿಸುತ್ತಾರೆ ಎಂದರು. ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ ಎಂದರು.
Comments